ಕತ್ತಿ ಹುಟ್ಟೂರು ಬಾಗೇವಾಡಿ ಗ್ರಾಮದಲ್ಲಿ ಶೋಕ

Webdunia
ಬುಧವಾರ, 7 ಸೆಪ್ಟಂಬರ್ 2022 (10:15 IST)
ಉಮೇಶ್ ಕತ್ತಿ ವಿಧಿವಶರಾದ ಹಿನ್ನೆಲೆ ಹುಟ್ಟೂರು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ನಿಧನರಾದ ವಿಷಯ ತಿಳಿದು ಮಧ್ಯರಾತ್ರಿಯೇ ಕತ್ತಿ ನಿವಾಸದತ್ತ ಜನರು ಬರುತ್ತಿದ್ದಾರೆ.

ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲೇ ಒಂದಷ್ಟು ಕುಟುಂಬ ಸದಸ್ಯರಿದ್ದಾರೆ. ಬೆಂಗಳೂರು ಎಚ್ಎಎಲ್ ನಿಂದ ವಿಶೇಷ ಹೆಲಿಕಾಪ್ಟರ್ನಲ್ಲಿ ಪಾರ್ಥಿವ ಶರೀರವನ್ನು ತರಲಾಗುತ್ತಿದೆ.

ಬೆಳಗ್ಗೆ 9 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು 10:30ಕ್ಕೆ ಸಂಕೇಶ್ವರದ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಕತ್ತಿ ಹುಟ್ಟೂರು 12ಗಂಟೆಗೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಂಜೆ 5ಗಂಟೆಗೆ ಬೆಲ್ಲದ ಬಾಗೇವಾಡಿ ತೋಟದಲ್ಲಿ ಅಂತ್ಯಕ್ರಿಯೆ ನೇರವೇರಲಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಕರೂರು ಕಾಲ್ತುಳಿತದ ಬಳಿಕ ಬಿಗಿ ಭದ್ರತೆಯಲ್ಲಿ ಚುನಾವಣಾ ರ‍್ಯಾಲಿ ಶುರು ಮಾಡಿದ ನಟ ವಿಜಯ್‌

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ನಾನೂ ಇದ್ದೀನಿ ಎಂದು ಎಂಟ್ರಿ ಕೊಟ್ಟವರು ಯಾರು

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿಗೆ ದಿನಗಣನೆ: ರಾಜ್ಯ ಪ್ರವಾಸದ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments