Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮ!

ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮ!
ಬೆಂಗಳೂರು , ಸೋಮವಾರ, 10 ಜನವರಿ 2022 (13:05 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪಾಸಿಟಿವಿಡಿ ದರ ಹೆಚ್ಚಿರುವ ಹಿನ್ನೆಲೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಈ ಮುನ್ನ ಸಂಕ್ರಾಂತಿ ಬಳಿಕ ರಿಲ್ಯಾಕ್ಸ್ ಮಾಡುವ ಬಗ್ಗೆ ನೋಡೋಣ ಎಂದಿದ್ದ ಬೊಮ್ಮಾಯಿ ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದ್ದಾರೆ. 

ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಯಾವ ರೀತಿ ಬೆಳವಣಿಗೆ ಆಗುತ್ತೆ ಅದರ ಅಧಾರದ ಮೇಲೆ ಕ್ರಮ ತೀರ್ಮಾನ ಮಾಡುತ್ತೇನೆ.

ಭಾನುವಾರ ರಾಜ್ಯದಲ್ಲಿ 12 ಸಾವಿರ ಕೇಸ್ ದಾಖಲಾಗಿದೆ ಮತ್ತು ಬೆಂಗಳೂರಲ್ಲಿ 9 ಸಾವಿರ ಕೇಸ್ ವರದಿಯಾಗಿದೆ. ಪಾಸಿಟಿವಿಟಿ ರೇಟ್ ಶೇ 6.8ರಷ್ಟು ಆಗಿದೆ. ಬೆಂಗಳೂರಲ್ಲಿ ಶೇ.10ರಷ್ಟಿದೆ. ಇಡೀ ಭಾರತದ ದೇಶದಲ್ಲಿ ಈಗ ನಮ್ಮ ರಾಜ್ಯ 3ನೇ ಸ್ಥಾನದಲ್ಲಿದೆ. ಹೀಗಾಗಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನ ತಗೆದುಕೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

11 ಬಾರಿ ಲಸಿಕೆ ಪಡೆದವನ ವಿರುದ್ಧ ಎಫ್ ಐಆರ್