Select Your Language

Notifications

webdunia
webdunia
webdunia
webdunia

ಚುನಾವಣಾ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ಆಪ್ತ

ಚುನಾವಣಾ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಸಚಿವ ಡಿ.ಕೆ.ಶಿವಕುಮಾರ್ ಆಪ್ತ
ಬೆಂಗಳೂರು , ಗುರುವಾರ, 29 ಮಾರ್ಚ್ 2018 (11:11 IST)
ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ರಾಜಕೀಯ ಮುಖಂಡರುಗಳು  ಈಗಾಗಲೇ ಸರ್ಕಾರಿ ವಾಹನಗಳನ್ನು ಬಿಟ್ಟು ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೆ ಸಚಿವ ಡಿ.ಕೆ.ಶಿವಕುಮಾರ್ ಆಪ್ತರೊಬ್ಬರು ಇನ್ನೂ ಸರ್ಕಾರಿ  ವಾಹನವನ್ನು ಬಳಸುವುದರ ಮೂಲಕ ಚುನಾವಣಾ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ.


ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ. ಶೇಷಾದ್ರಿ ಈಗಲೂ ಸರ್ಕಾರಿ ವಾಹನವನ್ನೇ ಬಳಕೆ ಮಾಡ್ತಿದ್ದಾರೆ. ಚುನಾವಣಾ ಅಧಿಕಾರಿಗಳಿಗೆ ತಿಳಿಯದಂತೆ ಸರ್ಕಾರಿ ವಾಹನ ಅಂತ ಇರೋ ಸ್ಟಿಕ್ಕರ್ ಗಳನ್ನ ತೆಗೆದು, ನಂಬರ್ ಪ್ಲೇಟ್ ನ್ನೂ ತೆಗೆದು ಹಾಕಿ ರಾಜಾರೋಷವಾಗಿ ಓಡಾಡುತ್ತಿರುವ  ಈ ದೃಶ್ಯ ಮಾಧ್ಯಮವೊಂದಕ್ಕೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಂಗ್ ಫಿಷರ್ ದೊರೆ ವಿಜಯ್ ಮಲ್ಯ ಮೂರನೇ ಮದುವೆಯ ತಯಾರಿಯಲ್ಲಿದ್ದಾರಂತೆ!