Publish Date: Wed, 28 Mar 2018 (12:54 IST)
Updated Date: Wed, 28 Mar 2018 (12:56 IST)
ಮಂಗಳೂರು : ಚುನಾವಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ಜನರಿಗೆ ಕುಕ್ಕರ್ ಹಾಗೂ ನೀರಿನ ಕ್ಯಾನ್ ಹಂಚಿರುವ ಕಾರಣದಿಂದ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರು ಶಾಸಕರ ವಿರುದ್ದ ಸಿಡಿದೆದ್ದಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು,’ ಕುಡಿಯುವ ನೀರಿನ ಕ್ಯಾನ್ ಮೇಲೆ ಮುನಿರತ್ನ ಫೋಟೋ ಹಾಕಿದ್ದಾರೆ. ನೀರು ಕೊಡ್ತಾ ಇರೋದು ದೇವ್ರು, ಅದು ಕೊಡೋಕೆ ಅವನ್ಯಾರು? ಇವನ ಫೋಟೋ ಇರೋ ಬಾಟಲ್ ನೀರು ನಾವ್ ಕುಡಿಬೇಕಾ? ಇಂಥವರಿಗೆ ಎಕಡಾ ತಗೊಂಡು ಹೊಡೀಬೇಕು, ಕ್ಯಾಕರಿಸಿ ಉಗೀರಿ. ವೋಟಿಗಾಗಿ ಕುಕ್ಕರ್ ಹಂಚುವ ಆಸಾಮಿ ಮುನಿರತ್ನ. ಸಿದ್ದರಾಮಯ್ಯ ಸರಿ ಇದ್ರೂ ಅವರ ಮನೆಯಲ್ಲಿರುವವರು ಸರಿ ಇಲ್ಲ. ಅಂಥವ್ರನ್ನ ಮನೆಯಿಂದ ಓಡಿಸಿ, ಇಲ್ಲದೆ ಇದ್ರೆ ಸಾಯಿಸಿ ಬಿಡಿ. ಅಂಥವ್ರು ನನ್ನ ಎಕಡಕ್ಕೆ ಸಮಾನ ಅಂತ ಹೇಳ್ತಿನಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ