ಪಶ್ಚಿಮ ಬಂಗಾಳ : ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಜಿದ್ದಾಜಿದ್ದಿನ ಪೈಪೋಟಿಗೆ, ಹಿಂಸೆಗೆ, ಹಿಂದೆಂದೂ ಕಂಡು ಕೇಳರಿಯದಂತಹ ಚುನಾವಣಾ ಕದನಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳ ವಿಧಾನಾಸಭಾ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮದೇ ಪಕ್ಷದಿಂದ ಬಿಜೆಪಿಗೆ ಹಾರಿಸಿದ್ದವೇಂದು ಅಧಿಕಾರಿ ವಿರುದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದರು.
ಇದು ಚುನಾವಣಾ ಅಕ್ರಮ ಎಂದು ಕರೆದಿದ್ದ ಮಮತಾ ಅವರು ಸುವೇಂದು ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುವುದರಿಂದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಕೌಶಿಕ್ ಚಂದಾ ಅವರು ಹಿಂದೆ ಸರಿದಿದ್ದಾರೆ
ಅದರೆ, ಇದೇ ವೇಳೆ, ನ್ಯಾಯಾಲಯವು ನ್ಯಾ. ಚಂದಾ ಅವರು ಪ್ರಕರಣವನ್ನು ಆಲಿಸುವುದರಿಂದ ಹಿಂದೆ ಸರಿಯಬೇಕು ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದ್ದರು ಅಲ್ಲದೆ ಅವರು ಈ ಮೊದಲು ಬಿಜೆಪಿಯಲ್ಲಿ ಇದ್ದರು ಎಂದು ಹೇಳಿದ್ದರು. ಆದ ಕಾರಣ ಮಮತಾ ಅವರಿಗೆ ರೂ. 5 ಲಕ್ಷ ದಂಡ ವಿಧಿಸಿದೆ.