Select Your Language

Notifications

webdunia
webdunia
webdunia
Friday, 25 April 2025
webdunia

ಮಂಡ್ಯದಲ್ಲಿ ಹೆಚ್ ಡಿ ಕುಮಾರಸ್ವಾಮಿ ಭರ್ಜರಿ ಪ್ರಚಾರ

ಎಚ್.ಡಿ.ಕುಮಾರಸ್ವಾಮಿ
ಮಂಡ್ಯ: , ಶನಿವಾರ, 28 ಏಪ್ರಿಲ್ 2018 (14:15 IST)
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಪರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ನಗರದಲ್ಲಿ ಅಬ್ಬರದ ರೋಡ್ ಷೋ ನಡೆಸಿದ್ರು.
ಮಂಡ್ಯ ನಗರದ ಕಲ್ಲಹಳ್ಳಿ ಬಡಾವಣೆಗೆ ಎಚ್ಡಿಕೆ ಬರುತ್ತಿದ್ದಂತೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಎಚ್ಡಿಕೆಯನ್ನ ಸ್ವಾಗತಿಸಿದ್ರು. ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ, ಹೂ ಎರಚಿ ಎಚ್ಡಿಕೆಗೆ ಭರ್ಜರಿ ಸ್ವಾಗತ ಕೋರಿದ್ರು. 
 
ಇನ್ನು ಕಲ್ಲಹಳ್ಳಿಯಲ್ಲಿ ರೋಡ್ ಷೋ ನಡೆಸಿದ ಎಚ್ಡಿಕೆಗೆ ಮಹಿಳೆಯರು ಮಕ್ಕಳು, ಮಹಡಿಯ ಮೇಲೆ ನಿಂತು ಪುಷ್ಪಾರ್ಚನೆ ಮಾಡ್ತಿದ್ರು. ಎಚ್ಡಿಕೆ  ಕಲ್ಲಹಳ್ಳಿ ಬಡಾವಣೆಯ ಮೂಲಕ ಶಂಕರಮಠ, ಪೇಟೆ ಬೀದಿ ಸಂಜಯ ವೃತ್ತ, ಆರ್.ಪಿ.ರಸ್ತೆ, ಕರ್ನಾಟಕ ಬಾರ್ ವೃತ್ತ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಪರ ರೋಡ್ ಷೋ ನಡೆಸಿದ್ರು. 
 
ಇದೇ ಸಂದರ್ಭದಲ್ಲಿ ಎಚ್ಡಿಕೆಗೆ ಅಭ್ಯರ್ಥಿ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಮುಖಂಡ ಅಶೋಕ್ ಜಯರಾಂ, ಕಿರುತೆರೆ ನಟರು ಸಾಥ್ ನೀಡಿದ್ರು. ಇನ್ನು ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮುಖಂಡರಾದ ಡಾ.ಕೃಷ್ಣ, ಕೀಲಾರ ರಾಧಾಕೃಷ್ಣ ಸಹ ರೋಡ್ ಷೋನಲ್ಲಿ ಭಾಗಿಯಾಗಿದ್ರು. 
 
ಇದೇ ಸಂದರ್ಭದಲ್ಲಿ ಮಾತನಾಡಿದ ಎಚ್ಡಿಕೆ, ಮಹಿಳೆಯರು, ವೃದ್ಧರ ಪರ ಜೆಡಿಎಸ್ ಸರ್ಕಾರವಿದ್ದು, ಅಭಿವೃದ್ಧಿಗಾಗಿ ಎಚ್ಡಿಕೆ ಬೆಂಬಲಿಸಿ ಎಂದು ಕರೆ ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆಗಲು ದೇವರಿಗೆ " ಹರಕೆ ಕಟ್ಟಿರುವ ಬಿಎಸ್ ವೈ"