Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮತ್ತೆ ಕೋವಿಡ್ ಏರಿಕೆ!

ರಾಜ್ಯದಲ್ಲಿ ಮತ್ತೆ ಕೋವಿಡ್ ಏರಿಕೆ!
ಬೆಂಗಳೂರು , ಶುಕ್ರವಾರ, 17 ಜೂನ್ 2022 (07:06 IST)
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ. ಸರ್ಕಾರ ಪ್ರಕಟ ಮಾಡಿರೋ ಮಾರ್ಗಸೂಚಿಯಲ್ಲಿ ಏನಿದೆ? ಜನ ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಬೇಕು. ಹೊರ ದೇಶದಿಂದ ಬರುವವರಿಗೆ ರ್ಯಾಂಡಮ್ ಸ್ಕ್ರೀನಿಂಗ್ ಮಾಡಬೇಕು ಮತ್ತು ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ. ಪಾಸಿಟಿವ್ ಆದ ಎಲ್ಲಾ ಸ್ವಾಬ್ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗಾಗಿ ರವಾನೆ ಮಾಡಬೇಕು. 

ಪಾಸಿಟಿವ್ ಆಗಿದ್ರೆ ಅಥವಾ ರಿಪೋರ್ಟ್ ಬರುವವದಿದ್ದರೆ, ವ್ಯಕ್ತಿಯನ್ನ ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ಅವಧಿ ಮುಗಿಯುವವರೆಗೂ ವೈದ್ಯರು ನಿಗಾ ಇಡಬೇಕು. ಎಲ್ಲಾ ಐಎಲ್ಐ ಸ್ಯಾರಿ ಕೇಸ್ಗಳ ಡೇಟಾವನ್ನು ಐಡಿಎಸ್ನಲ್ಲಿ ಅಪ್ಲೋಡ್ ಮಾಡಬೇಕು. ಆಸ್ಪತ್ರೆಗಳಿಗೆ ಐಎಲ್ಐ ಕೇಸ್ಗಳು ದಾಖಲಾದರೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಬೇಕು.

ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ತಂಡ ರಚನೆ ಮಾಡಿಕೊಂಡು ಸೆರೋ ಸರ್ವೆ ಮಾಡಲು ಸೂಚನೆ ನೀಡಲಾಗಿದೆ. 6 ರಿಂದ 14 ವರ್ಷದ ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೇಗಿದೆ. ಈಗಾಗಲೇ ಕೋವಿಡ್ ಬಂದು ಹೋಗಿದೆಯಾ ಹೇಗೆ ಅಂತಾ ಸೆರೋ ಸರ್ವೆ ಮಾಡಲು ಸರ್ಕಾರ ನಿರ್ಧರಿಸಿದ್ದು, ನಿಗದಿತ ಸಮಯದಲ್ಲಿ ಸೆರೋ ಸರ್ವೆ ಮಾಡಲು ಸೂಚನೆ ನೀಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ತನಿಖಾ ಸಂಸ್ಥೆಗಳ ಮೇಲೆ ಪ್ರಭಾವ ಕಾನೂನುಬಾಹಿರ: ಸಿಎಂ ಬೊಮ್ಮಾಯಿ