Publish Date: Fri, 18 Mar 2022 (13:33 IST)
Updated Date: Fri, 18 Mar 2022 (13:40 IST)
ಬೆಂಗಳೂರು : ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ 18ರಿಂದ 35 ವರ್ಷದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ದಿನಾಂಕ 27-03-2022 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ,
ಕುಂಬಳಗೋಡಿನ, ರಾಮೋಹಳ್ಳಿ ಕ್ರಾಸ್ ಬಳಿಯಿರುವ ರಾಜರಾಜೇಶ್ವರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.
ಪಿಯುಸಿ, ಐಟಿಐ, ಡಿಪ್ಲೋಮ, ಬಿಕಾಂ, ಬಿಬಿಎ, ಬಿಎ, ಬಿಸಿಎ, ಬಿಇ, ಎಂಕಾಂ, ಎಂಬಿಎ, ಎಂಎ, ಎಂಸಿಎ ಪದವಿಗಳನ್ನು ಹೊಂದಿದ ಉದ್ಯೋಗಕಾಂಕ್ಷಿಗಳಿಗೆ ಒಂಭತ್ತು ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳಾದ ಮುತ್ತೂಟ್ ಗ್ರೂಪ್, ಎಚ್ ಡಿ ಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್,ಯುರೇಕಾ ಫೋರ್ಬ್ಸ್, ಟೀಮ್ ಲೀಸ್, ಯುಟಿಎಲ್ ಟೆಕ್ನಾಲಜಿ ಲಿಮಿಟೆಡ್, ಜಸ್ಟ್ ಡಯಲ್, ಇಂಪ್ಯಾಕ್ಟ್, ರಿಲೆಯನ್ಸ್ಗಳಲ್ಲಿ ಉದ್ಯೋಗ ಸೃಷ್ಟಸಿಕೊಳ್ಳುವ ಅವಕಾಶ ಇದಾಗಿದೆ .
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್: 9964907444/7975014738ನ್ನು ಹಾಗೂ ನೋಂದಣಿಗಾಗಿ
https://forms.gle/FcuM18DKZ7Gsngqm6ಗೂಗಲ್ ಲಿಂಕ್ನ್ನು ಸಂಪರ್ಕಿಸಬಹುದಾಗಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಗಪ್ಪರವರು ತಿಳಿಸಿದ್ದಾರೆ.
Ramya kosira
Publish Date: Fri, 18 Mar 2022 (13:33 IST)
Updated Date: Fri, 18 Mar 2022 (13:40 IST)