Select Your Language

Notifications

webdunia
webdunia
webdunia
webdunia

ಜಿಯೋ, ಗೂಗಲ್ ಬದಲಾವಣೆ ನಿಮಗೆ ಗೊತ್ತೇ?

ಜಿಯೋ, ಗೂಗಲ್ ಬದಲಾವಣೆ ನಿಮಗೆ ಗೊತ್ತೇ?
ನವದೆಹಲಿ , ಸೋಮವಾರ, 25 ಅಕ್ಟೋಬರ್ 2021 (17:20 IST)
ನವದೆಹಲಿ : ಜಿಯೊ ಕಂಪನಿಯು ಸೋಮವಾರ ಬಿಡುಗಡೆ ಮಾಡಿರುವ ವಿಡಿಯೊದ ಪ್ರಕಾರ, ಜಿಯೊ ಪ್ಲಾಟ್ಫಾರಂ ಮತ್ತು ಗೂಗಲ್ ಕಂಪನಿ ಜೊತೆಗೂಡಿ ಜಿಯೊಫೋನ್ ನೆಕ್ಸ್ಟ್ಗೆ 'ಪ್ರಗತಿ ಒಎಸ್' ಅಭಿವೃದ್ಧಿಪಡಿಸಿವೆ.
ದೀಪಾವಳಿಗೆ ವೇಳೆಗೆ ಈ ಫೋನ್ ಬಿಡುಗಡೆ ಆಗುವ ನಿರೀಕ್ಷೆ ಮಾಡಲಾಗಿದೆ.
'ಪ್ರಗತಿ ಓಎಸ್' ಆಂಡ್ರಾಯ್ಡ್ನಿಂದ ಚಾಲಿತವಾಗಿದೆ. ಜಿಯೋ ಮತ್ತು ಗೂಗಲ್ನಲ್ಲಿ ಇರುವ ಉತ್ತಮ ಮನಸ್ಸುಗಳನ್ನು ಒಟ್ಟುಗೂಡಿಸುವ ಉತ್ಸಾಹಭರಿತ ಪ್ರಯತ್ನದ ಫಲಿತಾಂಶ ಇದಾಗಿದೆ ಎಂದು ಆಂಡ್ರಾಯ್ಡ್ನ ಪ್ರಧಾನ ವ್ಯವಸ್ಥಾಪಕ ರಾಮ್ ಪಾಪಟ್ಲಾ ಹೇಳಿದ್ದಾರೆ.
10 ಭಾರತೀಯ ಭಾಷೆಗಳಿಗೆ ಅನುವಾದ ಮಾಡಬಲ್ಲ ವೈಶಿಷ್ಟ್ಯವನ್ನು ಜಿಯೊಫೋನ್ ನೆಕ್ಸ್ಟ್ ಹೊಂದಿರಲಿದೆ. ರಿಲಯನ್ಸ್ ಸಮೂಹದ ನಿಯೋಲಿಂಕ್ ಕಂಪನಿಯು ತಿರುಪತಿ ಮತ್ತು ಶ್ರೀಪೆರಂಬದೂರಿನಲ್ಲಿ ತಯಾರಿಸಲಿರುವ ಕ್ವಾಲ್ಕಂ ಪ್ರೊಸೆಸರ್ ಅನ್ನು ಈ ಫೋನ್ ಹೊಂದರಲಿದೆ ಎಂದು ಕಂಪನಿಯು ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಂಬಾಕಿನಿಂದ ಹಾಳಾಗುತ್ತಿರುವ ಯುವಜನತೆ ಎಚ್ಚರ ಎಚ್ಚರ ...!!!