Select Your Language

Notifications

webdunia
webdunia
webdunia
webdunia

ಜಯನಗರದಲ್ಲಿ ಮತದಾನ ಶುರು: ವೋಟ್ ಹಾಕಿದ ಸೆಲೆಬ್ರಿಟಿಗಳು

ಜಯನಗರದಲ್ಲಿ ಮತದಾನ ಶುರು: ವೋಟ್ ಹಾಕಿದ ಸೆಲೆಬ್ರಿಟಿಗಳು
ಬೆಂಗಳೂರು , ಸೋಮವಾರ, 11 ಜೂನ್ 2018 (09:08 IST)
ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಘಟಾನುಘಟಿಗಳಿಂದ ಮತದಾನ ನಡೆಯುತ್ತಿದೆ.

ಬಿಜೆಪಿ ಶಾಸಕ ವಿಜಯ್ ಕುಮಾರ್ ಸಾವಿನಿಂದಾಗಿ ಈ ಕ್ಷೇತ್ರದ ವಿಧಾನಸಭೆ ಮತದಾನ ಮುಂದೂಡಲಾಗಿತ್ತು. ಹೀಗಾಗಿ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಪಿಯಿಂದ ದಿವಂಗತ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬು ಮತ್ತು ಕಾಂಗ್ರೆಸ್ ನಿಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಕಣಕ್ಕಿಳಿದಿದ್ದಾರೆ.

ಜಯನಗರ ಟಿ ಬ್ಲಾಕ್ ನ ಮತಗಟ್ಟೆಯಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಮತಚಲಾಯಿಸಿದರು. ಉಳಿದಂತೆ ಸಾಹಿತಿ ಬರಗೂರು ರಾಮಚಂದ್ರಪ್ಪ, ಹಾಸ್ಯ ನಟ ಉಮೇಶ್ ಸೇರಿದಂತೆ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಬಿಗಿ ಭದ್ರತೆ ನಡುವೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ನಿತಿನ್ ಗಡ್ಕರಿಯಿಂದಲೇ ಪ್ರಧಾನಿ ಮೋದಿ ಹತ್ಯೆ! ವೈರಲ್ ಆಯ್ತು ಟ್ವೀಟ್