ಹೊಸದಿಲ್ಲಿ: ಖಾಸಗಿ ವಾಹನದಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯ¬ಮವನ್ನು ದಿಲ್ಲಿ ಸರಕಾರ ರದ್ದುಪಡಿಸಿದೆ.
ಸೋಮವಾರದಿಂದ ಈ ನಿಯಮ ಜಾರಿಗೆ ಬರಲಿದ್ದು, ಅದೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಹೊರತು¬ಪಡಿಸಿ ಉಳಿದೆಲ್ಲಾ ನಿರ್ಬಂಧಗಳನ್ನೂ ಸರಕಾರ ತೆಗೆದು ಹಾಕಲಿದೆ.
ಕೊರೊನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿ¬ರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರ¬ವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಿಂದೆ, ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯವಾ¬ಗಿತ್ತು. ರಸ್ತೆ ಸಹ ಸಾರ್ವಜನಿಕ ಪ್ರದೇಶ ಎಂದು ವ್ಯಾಖ್ಯಾನಿಸಿ ಈ ನಿಯಮ ಜಾರಿಗೆ ತರಲಾ¬ಗಿತ್ತು.
ಈಗ ಈ ನಿಯಮ ಕೈ ಬಿಟ್ಟರೂ, ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕೆಂಬ ನಿಯಮ ಮುಂದುವರಿಯಲಿದೆ. ಸಾರ್ವ¬ಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ.