Select Your Language

Notifications

webdunia
webdunia
webdunia
webdunia

ವಾಹನ ಸವಾರರೇ ಗಮನಿಸಿ: ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ

ವಾಹನ ಸವಾರರೇ ಗಮನಿಸಿ:  ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ
ನವದೆಹಲಿ , ಬುಧವಾರ, 16 ಫೆಬ್ರವರಿ 2022 (14:10 IST)
ನವದೆಹಲಿ : ಭಾರತದಲ್ಲಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ಮಾಡುವ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
 
ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್‍ಗಳನ್ನು ತಯಾರಿಸುವಂತೆ ಹೆಲ್ಮೆಟ್ ತಯಾರಕರಿಗೆ ಸರ್ಕಾರ ಸೂಚಿಸಿದೆ. ಹೊಸ ನಿಯಮದ ಪ್ರಕಾರ ಉಲ್ಲಂಘನೆಗೆ 1,000 ರೂ. ದಂಡ ಮತ್ತು 3 ತಿಂಗಳ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.

ಹೊಸ ನಿಯಮಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ 1989ರ ತಿದ್ದುಪಡಿಯ ಮೂಲಕ ಪ್ರಸ್ತಾಪಿಸಲಾಗಿದೆ. ಪ್ರಸ್ತಾವಣೆಯು ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಒಳಗೊಂಡಿರುತ್ತದೆ.

ಮಗುವನ್ನು ಹೊಂದಿರುವ ಯಾವುದೇ ದ್ವಿಚಕ್ರ ವಾಹನವು ಗಂಟೆಗೆ ಗರಿಷ್ಠ 40-ಕಿಮೀ ವೇಗದ ಮಿತಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. 

 
ಮಕ್ಕಳ ಹೆಲ್ಮೆಟ್‍ಗಳನ್ನು ತಯಾರಿಸಲು ಸರ್ಕಾರವು ಭಾರತೀಯ ಹೆಲ್ಮೆಟ್ ತಯಾರಕರಿಗೆ ಸೂಚಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ, ಸುರಕ್ಷತಾ ಜಾಕೆಟ್‌ಗಳಿಗೆ ಭುಜದ ಕುಣಿಕೆಗಳನ್ನು ರೂಪಿಸುವ ಒಂದು ಜೋಡಿ ಪಟ್ಟಿಗಳೊಂದಿಗೆ ತಯಾರಿಸಲಾಗುತ್ತದೆ.

30 ಕೆಜಿ ತೂಕವನ್ನು ಹೊರುವ ಸಾಮಥ್ರ್ಯವನ್ನು ಹೊಂದಿರಬೇಕು. ನಾಲ್ಕು ವರ್ಷದೊಳಗಿನ ಮಕ್ಕಳು ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ ಅನ್ನು ಧರಿಸಬೇಕು. ಸರ್ಕಾರವು ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು ಎಂದು ಸೂಚಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಾಜಿನಿಂದ ಕುತ್ತಿಗೆ ಕೊಯ್ದುಕೊಂಡ ಖೈದಿ!?