Select Your Language

Notifications

webdunia
webdunia
webdunia
webdunia

ಶೋಭಾಯಾತ್ರೆ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ

ಶೋಭಾಯಾತ್ರೆ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ
ಶಿವಮೊಗ್ಗ , ಶನಿವಾರ, 10 ಸೆಪ್ಟಂಬರ್ 2022 (11:56 IST)
ಶಿವಮೊಗ್ಗ : ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ ನಡೆದಿದೆ.

ರಾಷ್ಟ್ರೀಯ ಲಾಂಚನದ ಮೇಲೆ ಹಿಂದೂ ಸಂಘಟನೆಗಳು ಕೇಸರಿ ಧ್ವಜ ಹಾರಿಸಿವೆ. ನಗರದ ಅಶೋಕ ರಸ್ತೆಯಲ್ಲಿರುವ ಅಶೋಕ ಸ್ಥಂಭವನ್ನೇ ಕೇಸರಿಮಯ ಮಾಡಲಾಗಿದೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಕೇಸರಿ ಧ್ವಜ ತೆರವು ಮಾಡಿದ್ದಾರೆ. ಈ ಮಧ್ಯೆ, ಬಿಗಿಭದ್ರತೆ ನಡುವೆ ಶೋಭಾ ಯಾತ್ರೆ ನಡೆಯಿತು. 

ಸಾವಿರಾರು ಮಂದಿ ಶೂಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯರಾತ್ರಿ 12 ಗಂಟೆಗೆ ತುಂಗಾ ನದಿಯಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಲಿಜಬೆತ್ ಹಿರಿಯ ಪುತ್ರ 3ನೇ ಚಾರ್ಲ್ಸ್ ಬ್ರಿಟನ್ ರಾಜನಾಗಿ ಆಯ್ಕೆ