Select Your Language

Notifications

webdunia
webdunia
webdunia
webdunia

ಗೋಧಿ ರಫ್ತು ನಿಲ್ಲಿಸಿದ ಭಾರತ !

webdunia
ನವದೆಹಲಿ , ಶುಕ್ರವಾರ, 24 ಜೂನ್ 2022 (14:24 IST)
ಢಾಕಾ : ಬಾಂಗ್ಲಾದೇಶಕ್ಕೆ ಅತಿ ದೊಡ್ಡ ಧಾನ್ಯ ಪೂರೈಕೆದಾರ ಎಂದೇ ಹೆಸರಾಗಿರುವ ಭಾರತವು ಕಳೆದ ತಿಂಗಳಿಂದ ಗೋಧಿ ರಫ್ತನ್ನು ಸ್ಥಗಿತಗೊಳಿಸಿದೆ.

ಪರಿಣಾಮವಾಗಿ ಬಾಂಗ್ಲಾದೇಶವು ಗೋಧಿ ಪೂರೈಕೆಗಾಗಿ ರಷ್ಯಾದೊಂದಿಗೆ ಒಪ್ಪಂದಕ್ಕೆ ಯತ್ನಿಸುತ್ತಿದೆ.

ವಿಶ್ವದ ಅತಿದೊಡ್ಡ ಗೋಧಿ ರಫ್ತುದಾರ ರಷ್ಯಾದೊಂದಿಗಿನ ಪೂರೈಕೆ ಒಪ್ಪಂದವು ಢಾಕಾಗೆ ಜಾಗತಿಕ ಬೆಲೆಗಳಿಗಿಂತ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.

ಒಪ್ಪಂದವನ್ನು ಅಂತಿಮಗೊಳಿಸಲು ಬಾಂಗ್ಲಾದೇಶವು ಗುರುವಾರ ರಷ್ಯಾದೊಂದಿಗೆ ವರ್ಚುವಲ್ ಸಭೆ ನಡೆಸಲಿದೆ ಎಂದು ಬಾಂಗ್ಲಾದೇಶದ ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ನಾವು ಆರಂಭದಲ್ಲಿ ರಷ್ಯಾದಿಂದ ಕನಿಷ್ಠ 2,00,000 ಟನ್ ಗೋಧಿಗೆ ಬೇಡಿಕೆ ಇಡುತ್ತೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಂಗ್ಲಾದೇಶವು ಸುಮಾರು 7 ಮಿಲಿಯನ್ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ ಅದರಲ್ಲಿ ಮೂರನೇ ಎರಡರಷ್ಟು ಪ್ರಮಾಣದ ಗೋಧಿ ಭಾರತದಿಂದ ಬಂದಿದೆ.

ಭಾರತದ ರಫ್ತು ನಿಷೇಧದ ನಂತರ ಬಾಂಗ್ಲಾದೇಶವು ಅಂತರರಾಷ್ಟ್ರೀಯ ಟೆಂಡರ್ಗಳ ಮೂಲಕ ಸರಬರಾಜನ್ನು ಪಡೆಯಲು ಪ್ರಯತ್ನಿಸಿತು. ಆದರೆ ಹೆಚ್ಚಿನ ಬೆಲೆ ಕಾರಣದಿಂದಾಗಿ ಸದ್ಯ ಈ ಯೋಜನೆಯನ್ನು ಕೈಬಿಟ್ಟಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ನಿರ್ಮಾಣ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಬೊಮ್ಮಾಯಿ