Webdunia - Bharat's app for daily news and videos

Install App

ಗೋಧಿ ರಪ್ತು ನಿಷೇಧಿಸಿದ ಭಾರತ!

Webdunia
ಬುಧವಾರ, 25 ಮೇ 2022 (11:56 IST)
ನವದೆಹಲಿ : ರಾಷ್ಟ್ರದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ ಭಾರತವು ಈ ತಿಂಗಳ ಆರಂಭದಲ್ಲಿ ವಿದೇಶಕ್ಕೆ ಗೋಧಿ ರಫ್ತನ್ನು ನಿಷೇಧಿಸಿತು.

ಆದರೆ ಭಾರತ ಗೋಧಿ ರಫ್ತು ಮೇಲಿನ ತನ್ನ ನಿಷೇಧವನ್ನು ಆದಷ್ಟು ಬೇಗ ಮರುಪರಿಶೀಲಿಸುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿ  ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಅವರು ಭಾರತವನ್ನು ಒತ್ತಾಯಿಸಿದ್ದಾರೆ.

ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಜಾರ್ಜಿವಾ, ರಫ್ತುಗಳನ್ನು ನಿರ್ಬಂಧಿಸುವುದು ಇತರ ರಾಷ್ಟ್ರಗಳನ್ನು ಅದೇ ರೀತಿ ಮಾಡಲು ಪ್ರೇರೇಪಿಸಬಹುದು. ಇದು ಜಾಗತಿಕ ಸಮುದಾಯವನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ಒತ್ತಿ ಹೇಳಿದರು.

ಭಾರತ ಗೋಧಿ ಮೇಲಿನ ರಫ್ತು ನಿಷೇಧವನ್ನು ತೆಗೆದು ಹಾಕಿದರೆ ಅದು ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತದೆ ಎಂದು ಕೇಳಿದಾಗ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ  ಇಡೀ ವಿಶ್ವಕ್ಕೆ ಗೋಧಿ ಪೂರೈಕೆಯ ಕೊರತೆ ತೀವ್ರ ಪರಿಣಾಮ ಬೀರಿದೆ.

ಹೀಗಿರುವಾಗ ಭಾರತವು ಎಷ್ಟು ರಫ್ತು ಮಾಡಬಹುದು ಮತ್ತು ಅದು ತನ್ನ ರಫ್ತುಗಳನ್ನು ಎಲ್ಲಿ ನಿರ್ದೇಶಿಸುತ್ತದೆ ಎಂಬುದರ ಆಧಾರದ ಮೇಲೆ ಅದನ್ನು ನಿರ್ಧರಿಸಬಹುದು ಎಂದು ಜಾರ್ಜಿವಾ ಹೇಳಿದರು.

ವಿಶೇಷವಾಗಿ ಗೋಧಿಯ ಕೊರತೆಯಿಂದ ತೀವ್ರವಾಗಿ ಬಾಧಿತವಾಗಿರುವ ಈಜಿಪ್ಟ್ ಅಥವಾ ಲೆಬನಾನ್ನಂತಹ ದೇಶಗಳಿಗೆ  ರಫ್ತುಗಳು ಹೋದರೆ ಗಮನಾರ್ಹ ಪರಿಣಾಮ ಆಗಲಿದೆ. ಹೆಚ್ಚುತ್ತಿರುವ ಹಸಿವು ಮಾತ್ರವಲ್ಲದೆ ಸಾಮಾಜಿಕ ಅಶಾಂತಿಯ ಅಪಾಯವಿರುವ ದೇಶಗಳಲ್ಲಿ ಇವು ಸೇರಿವೆ. ಇದು ಜಾಗತಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಫೇಸ್ ಬುಕ್‌ನಲ್ಲಿ ವಿಡಿಯೋ ಹಂಚಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಮರಳು ಗಣಿಗಾರಿಕೆ ವೀಕ್ಷಿಸಲು ಹೋದ ವಿಜಯೇಂದ್ರಗೆ ಖರ್ಗೆ ಬೆಂಬಲಿಗರಿಂದ ಅಡ್ಡಿ: ಬಿಜೆಪಿ ಕೆಂಡಾಮಂಡಲ

ಮುಂದಿನ ಸುದ್ದಿ
Show comments