Select Your Language

Notifications

webdunia
webdunia
webdunia
Friday, 11 April 2025
webdunia

ರಾಜ್ಯದಲ್ಲಿ ಪಾಸಿಟಿವಿಟಿ ದರ ಹೆಚ್ಚಳ

ಸೋಂಕು
ಬೆಂಗಳೂರು , ಶನಿವಾರ, 23 ಏಪ್ರಿಲ್ 2022 (06:30 IST)
ದೇಶದ ಇತರೆಡೆಯಂತೆ ರಾಜ್ಯದಲ್ಲೂ ನಿಧಾನವಾಗಿ ಕೋವಿಡ್ ಹೆಚ್ಚಾಗುತ್ತಿದೆ.

ಏಪ್ರಿಲ್ ಮೊದಲ ವಾರಕ್ಕೆ ಹೋಲಿಸಿದರೆ ಪಾಸಿಟಿವಿಟಿ ದರ 2 ಪಟ್ಟು ದರ ಏರಿದೆ. ವಾರದ ಸೋಂಕು ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ.
ಮಕ್ಕಳಲ್ಲಿ ಸೋಂಕು ಹೆಚ್ಚಳ ತೀವ್ರ ಭೀತಿ.

ದೆಹಲಿಗೆ ಸಮೀಪದ ಉತ್ತರಪ್ರದೇಶದ ಗೌತಮ ಬುದ್ಧನಗರ ಜಿಲ್ಲೆಯಲ್ಲಿ ಮಂಗಳವಾರ 107 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದಾರೆ. ಆ ಪೈಕಿ 33 ಮಂದಿ ಮಕ್ಕಳಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ.

ದಿಲ್ಲಿ, ಉತ್ತರ ಪ್ರದೇಶ, ಹರಾರಯಣ, ಮಹಾರಾಷ್ಟ್ರ ಹಾಗೂ ಮಿಜೋರಂಗಳಲ್ಲಿ ಪಾಸಿಟಿವಿಟಿ ದರ ಹಾಗೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ. ಹೀಗಾಗಿ ಇಲ್ಲಿ ಕೋವಿಡ್ ಸನ್ನಡತೆ ಪಾಲನೆ, ಪರೀಕ್ಷೆ, ಚಿಕಿತ್ಸೆ, ಸೂಕ್ತ ಚಿಕಿತ್ಸೆ- ಇತ್ಯಾದಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ರಾಜಧಾನಿ ನವದೆಹಲಿಗೆ ಹೊಂದಿಕೊಂಡಂತೆ ಇರುವ ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಮಂಗಳವಾರ 107 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಇದರಲ್ಲಿ 33 ಮಕ್ಕಳೇ ಇದ್ದಾರೆ. ಹೀಗಾಗಿ ಸ್ಥಳೀಯ ಪೋಷಕರಲ್ಲಿ ಆತಂಕ ಉಂಟಾಗಿದೆ. ಆದರೆ ಕೇಸು ಹೆಚ್ಚಳದ ಬಗ್ಗೆ ಆತಂಕದ ಬದಲು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರಗ ಜ್ಞಾನೇಂದ್ರ ಗೃಹ ಸಚಿವರಾಲು ನಾಲಾಯಕ್ಕು: ಸಿದ್ದರಾಮಯ್ಯ