Select Your Language

Notifications

webdunia
webdunia
webdunia
webdunia

ಎಸ್ಬಿಐ ಗ್ರಾಹಕರಾಗಿದ್ದರೆ ಕೂಡಲೇ ಈ ಕೆಲಸ ಮಾಡಿ: ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಲಿದೆ ಬ್ಯಾಂಕ್ ಅಕೌಂಟ್!

ಎಸ್ಬಿಐ ಗ್ರಾಹಕರಾಗಿದ್ದರೆ ಕೂಡಲೇ ಈ ಕೆಲಸ ಮಾಡಿ: ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಲಿದೆ ಬ್ಯಾಂಕ್ ಅಕೌಂಟ್!
ನವದೆಹಲಿ , ಸೋಮವಾರ, 13 ಸೆಪ್ಟಂಬರ್ 2021 (12:18 IST)
ನವದೆಹಲಿ : ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ, ನಿಮ್ಮ ಅಕೌಂಟ್ ಈ ಬ್ಯಾಂಕ್ನಲ್ಲಿ ಇದ್ದರೆ ಕೂಡಲೇ ಈ ಒಂದು ಕೆಲಸವನ್ನು ನೀವು ಮಾಡಲೇಬೇಕಿದೆ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಸಮಸ್ಯೆಯಲ್ಲಿ ಸಿಲುಕಲಿದೆ.

ಅದೇದೆನಂದರೆ ಗ್ರಾಹಕರು ತಮ್ಮ ಕಾಯಂ ಖಾತೆ ಸಂಖ್ಯೆಯನ್ನು (PAN -ಪ್ಯಾನ್) ತಮ್ಮ ಆಧಾರ್ ಕಾರ್ಡ್ ಜತೆ ಲಿಂಕ ಮಾಡಬೇಕಿದೆ. ಇದಕ್ಕೆ ಈಗಾಗಲೇ ಹಲವು ಗಡುವು ಕೊಟ್ಟಿರುವ ಬ್ಯಾಂಕ್ ಇದೀಗ ಸೆಪ್ಟೆಂಬರ್ 30ರ ಗಡುವು ನೀಡಿದೆ. ಅವಧಿಯ ಒಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಬೇಕಿದೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬ್ಯಾಂಕ್ ಖುದ್ದು ಮಾಹಿತಿ ನೀಡಿದೆ. ಒಂದು ವೇಳೆ ಸೆ.30ರ ಒಳಗೆ ಈ ರೀತಿ ಮಾಡದೇ ಹೋದರೆ ಗ್ರಾಹಕರು ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಬ್ಯಾಂಕ್ ಎಚ್ಚರಿಕೆ ನೀಡಿದೆ. 'ನಮ್ಮ ಗ್ರಾಹಕರಿಗೆ ಅನಾನುಕೂಲತೆ ಆಗುವುದನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಆಧಾರ್ನೊಂದಿಗೆ ಪ್ಯಾನ್ ನಂಬರ್ ಲಿಂಕ್ ಮಾಡಿ. ಇದು ಕಡ್ಡಾಯ' ಎಂದು ಟ್ವೀಟ್ ಮೂಲಕ ಎಸ್ಬಿಐ ಸೂಚನೆ ನೀಡಿದೆ.
ಹಾಗಿದ್ದರೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಹೇಗೆ ಎಂಬ ಸಂದೇಹವೆ? ಇಲ್ಲಿದೆ ಅದಕ್ಕೆ ಪರಿಹಾರ
* ಮೊದಲಿಗೆ ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ https://incometaxindiaefiling.gov.in / ಕ್ಲಿಕ್ ಮಾಡಿ.
* ಆಧಾರ್ ಲಿಂಕ್ ವಿಭಾಗ ನೋಡಿ
* ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ.
* ('ಲಿಂಕ್ ಆಧಾರ್') ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಇಷ್ಟು ಮಾಡಿದರೆ ಆಧಾರ್ ಜತೆ ಪ್ಯಾನ್ ಕಾರ್ಡ್ ಲಿಂಕ್ ಆಗಲಿದೆ.
* ನೀವು https://www.utiitsl.com/ / ಅಥವಾ https://www.egov-nsdl.co.in/ ಲಿಂಕ್ಗಳನ್ನು ಕ್ಲಿಕ್ ಮಾಡಿಯೂ ಇವುಗಳ ಜೋಡಣೆ ಮಾಡಬಹುದು.
ಎಸ್ಎಂಎಸ್ ಮೂಲಕ ಆಧಾರ್-ಪ್ಯಾನ್ ಜೋಡಣೆ ಹೇಗೆ?
* ಮೊದಲಿಗೆ ಫೋನ್ನಲ್ಲಿ UIDPAN ಎಂದು ಟೈಪಿಸಿ ಸ್ಪೇಸ್ ಕೊಟ್ಟು 12 ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ ಸ್ಪೇಸ್ ಕೊಟ್ಟು 10 ಅಂಕಿಯ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. (UIDPAN <12 Digit Aadhaar> <10 Digit PAN>) ಈಗ ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ. ನಿಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲಾಗುತ್ತದೆ.
ಒಂದು ವೇಳೆ ಪ್ಯಾನ್ ನಿಷ್ಕ್ರಿಯವಾಗಿದ್ದರೆ ಏನು ಮಾಡುವುದು?
ಇದಕ್ಕಾಗಿ, ನೀವು ಎಸ್ಎಂಎಸ್ ಕಳುಹಿಸಬೇಕು.- ಸಂದೇಶ ಪೆಟ್ಟಿಗೆಗೆ ಹೋಗುವ ಮೂಲಕ ನಿಮ್ಮ ನೋಂದಾಯಿತ ಮೊಬೈಲ್ನಿಂದ ನೀವು 12 ಅಂಕಿಯ ಪ್ಯಾನ್ ಅನ್ನು ನಮೂದಿಸಬೇಕು. ಇದರ ನಂತರ, ಸ್ಪೇಸ್ ನೀಡುವ ಮೂಲಕ 10-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ಈ ಸಂದೇಶವನ್ನು 567678 ಅಥವಾ 56161 ಗೆ ಎಸ್ಎಂಎಸ್ ಮಾಡಬೇಕು. ಇಲ್ಲಿದೆ ನೋಡಿ ಎಸ್ಬಿಐ ಟ್ವೀಟ್


Share this Story:

Follow Webdunia kannada

ಮುಂದಿನ ಸುದ್ದಿ

ತಾಂತ್ರಿಕ ದೋಷ: ಟೇಕ್ ಆಫ್ ಆದ ಬೆನ್ನಲ್ಲೇ ಕೆಳಗಿಳಿದ ಏರ್ ಇಂಡಿಯಾ ವಿಮಾನ