ಎಸ್ಬಿಐ ಗ್ರಾಹಕರು ತಪ್ಪದೇ ಓದಿ
ಇಂದಿನಿಂದ SBI ಗ್ರಾಹಕರಿಗೆ ಹೊಸ ನಿಯಮಗಳು ATM ಡ್ರಾ, ಚೆಕ್ಬುಕ್ಗೆ ಎಷ್ಟು ಹಣ ಕಡಿತ?
ನವದೆಹಲಿ: ಜುಲೈ 1 ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ.
ಸ್ವಯಂಚಾಲಿತ ಟೆಲ್ಲರ್ ಯಂತ್ರಗಳು (ಎಟಿಎಂಗಳು) ಮೂಲಕ ನಾಲ್ಕು ಬಾರಿ ಹಣವನ್ನು ತೆಗೆದುಕೊಂಡ ನಂತರ ಅದರ ಶಾಖೆಗಳಿಂದ ನೀವು ಹಣವನ್ನು ಡ್ರಾ(ತೆಗೆದರೆ) ಮಾಡಿದರೆ ನಿಮ್ಮ ಹಣಕ್ಕೆ ಬ್ಯಾಂಕ್ ಶುಲ್ಕವನ್ನು ವಿಧಿಸುತ್ತದೆ.ಈ ಹೊಸ ಬದಲಾವಣೆಗಳು ಪ್ರಾಥಮಿಕವಾಗಿ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್ಬಿಡಿ) ಖಾತೆಯನ್ನು ಹೊಂದಿರುವವರ ಮೇಲೆ ಪರಿಣಾಮವನ್ನು ಬೀರುತ್ತದೆ. ಮೊದಲ 10 ಉಚಿತ ಚೆಕ್ ಸೀಟ್ಗಳ ನಂತರ 10 ಚೆಕ್ ಸೀಟ್ಗಳಿಗೆ 40 ರೂ. ಜೊತೆಗೆ ಜಿಎಸ್ಟಿ ಹಾಗೂ 25 ಚೆಕ್ ಸೀಟ್ಗಳಿಗೆ ರೂ.75 ಜೊತೆಗೆ ಜಿಎಸ್ಟಿ ಮತ್ತು ತುರ್ತು ಚೆಕ್ ಬುಕ್ಗೆ 50 ರೂ. ಜೊತೆಗೆ ಜಿಎಸ್ಟಿ ಅದರಲ್ಲಿ ನೀವು 10 ಚೆಕ್ ಶೀಟ್ಗಳನ್ನು ಪಡೆಯಬಹುದಾಗಿದೆ ವ್ಯಾಪಕ ಶ್ರೇಣಿಯಲ್ಲಿ ಇತರೆ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಮುಂಬರುವ ಬದಲಾವಣೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಬಿಎಸ್ಬಿಡಿ ಖಾತೆದಾರರು ಹಣ ತೆಗೆದುಕೊಳ್ಳುವ ಸಮಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು:
ಬಿಎಸ್ಬಿಡಿ ಖಾತೆಗಳನ್ನು ಹೊಂದಿರುವ ಗ್ರಾಹಕರು ಈ ಹೊಸ ಬದಲಾವಣೆಗಳ ಕೇಂದ್ರಬಿಂದುಗಳಾಗಿರುತ್ತಾರೆ. ಅವುಗಳಲ್ಲಿ ಒಂದು ಎಟಿಎಂ ಮತ್ತು ಬ್ಯಾಂಕ್ ಶಾಖೆಗಳಿಂದ ಹಣವನ್ನು ತೆಗೆದುಕೊಳ್ಳಲು ಎಸ್ಬಿಐ ವಿಧಿಸುವ ಶುಲ್ಕಗಳು. ಬಿಎಸ್ಬಿಡಿ ಖಾತೆಯು ಮೂಲಭೂತವಾಗಿ ಶೂನ್ಯ-ಬ್ಯಾಲೆನ್ಸ್ ಅಥವಾ ಕನಿಷ್ಠ ಬ್ಯಾಲೆನ್ಸ್ ಖಾತೆಯಾಗಿದ್ದು, ಅದನ್ನು ಉಳಿತಾಯ ಖಾತೆಯಾಗಿ ಒದಗಿಸಲಾಗುತ್ತದೆ, ಇದು ಕೆಲವು ಕನಿಷ್ಠ ಸೌಲಭ್ಯಗಳನ್ನು ಉಚಿತವಾಗಿ ಪಡೆಯುತ್ತದೆ. ಬಿಎಸ್ಬಿಡಿ ಖಾತೆಗಳಿಗೆ ಸೇವಾ ಶುಲ್ಕಗಳ ಪರಿಷ್ಕರಣೆಯ ಪ್ರಕಾರ,ಮೊದಲ ನಾಲ್ಕು ಉಚಿತ ಹಣ ತೆಗೆದುಕೊಳ್ಳುವಿಕೆ ನಂತರ ಹೆಚ್ಚುವರಿ ಹಣವನ್ನು ಹತ್ತಿರದ ಎಟಿಎಂಗಳಿಂದ ಡ್ರಾ ಮಾಡಿದರೆ ನಿಮ್ಮ ಸೇವೆಗಳಿಗೆ ಎಸ್ಬಿಐ 15 ರಿಂದ 75 ರೂ ಶುಲ್ಕವನ್ನು ವಿಧಿಸುತ್ತದೆ. ಆದರೆ, ಶಾಖೆಗಳಲ್ಲಿ, ಎಟಿಎಂ ಯಂತ್ರಗಳಲ್ಲಿ ಅಥವಾ ನಗದು ವಿತರಕಗಳಲ್ಲಿ (ಸಿಡಿಎಂ) ಹಣಕಾಸೇತರ ವಹಿವಾಟುಗಳು ಮತ್ತು ವರ್ಗಾವಣೆ ವ್ಯವಹಾರಗಳು ಮುಕ್ತವಾಗಿರುತ್ತವೆ ಅವುಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ.