Select Your Language

Notifications

webdunia
webdunia
webdunia
webdunia

ಗಾಲ್ಫ್: ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಕನ್ನಡತಿ ಅದಿತಿ ಅಶೋಕ್!

ಕರ್ನಾಟಕದ ಹೆಮ್ಮೆಯ ಯುವ ಗಾಲ್ಫರ್ ಅದಿತಿ ಅಶೋಕ್, ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮೊತ್ತ ಮೊದಲ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆ ಸಂಪಾದಿಸಿದ್ದಾರೆ. ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಈ ಸಾಧನೆ ಮಾಡಿದ್ದಾರೆ.

ಗಾಲ್ಫ್: ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಕನ್ನಡತಿ ಅದಿತಿ ಅಶೋಕ್!
Bangalore , ಬುಧವಾರ, 30 ಜೂನ್ 2021 (09:48 IST)
ಬೆಂಗಳೂರು: ಎಲ್ಪಿಜಿಎ ಟೂರ್ ಮೂಲಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಯುವ ತಾರೆ ಅದಿತಿ ಅಶೋಕ್ ಪಾತ್ರರಾಗಿದ್ದಾರೆ.

ಹೈಲೈಟ್ಸ್:

•ಕೊರೊನ ವೈರಸ್ ಕಾರಣ ಮುಂದೂಡಲ್ಪಟ್ಟಿದ್ದ 2020ರ ಒಲಿಂಪಿಕ್ಸ್ ಕ್ರೀಡಾಕೂಟ.
•ಗಾಲ್ಫ್ನಲ್ಲಿ ಒಲಿಂಪಿಕ್ಸ್ಗೆ ಆಯ್ಕೆಯಾದ ಕರ್ನಾಟಕದ ತಾರೆ ಅದಿತಿ ಅಶೋಕ್.
•2018ರಿಂದ ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆ.
ಕೊರೊನಾ ವೈರಸ್ ಕಾರಣ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು 2020ರಿಂದ 2021ಕ್ಕೆ ಮುಂದೂಡಲಾಗಿತ್ತು. ಇದೀಗ ಕ್ರೀಡಾಕೂಟ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇರುವಾಗ ಬೆಂಗಳೂರಿನ 23 ವರ್ಷದ ಗಾಲ್ಫರ್ ಅದಿತಿ ಶುಭ ಸುದ್ದಿ ನೀಡಿದ್ದಾರೆ.
2018ರಲ್ಲಿ ಆರಂಭಗೊಂಡ ಅರ್ಹತಾ ಸುತ್ತಿನಲ್ಲಿ ಸದಾ ಮುನ್ನಡೆ ಕಾಯ್ದಕೊಂಡು ಬಂದಿರುವ ಅದಿತಿ, ಮೂರು ವರ್ಷಗಳ ಹಿಂದೆ ಒಲಿಂಪಿಕ್ಸ್ ಶ್ರೇಯಾಂಕ ಪಟ್ಟಿಯಲ್ಲಿ 28ನೇ ಸ್ಥಾನ ಪಡೆದಿದ್ದರು. ಇದೀಗ ಅಂತಾರಾಷ್ಟ್ರೀಯ ಗಾಲ್ಫ್ ಒಕ್ಕೂಟ ಮಂಗಳವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 45ನೇ ಸ್ಥಾನ ಪಡೆಯುವ ಮೂಲಕ ಟೋಕಿಯೋ ಟಿಕೆಟ್ ಪಡೆದಿದ್ದಾರೆ.
ಈಜು: ಟೋಕಿಯೋ ಒಲಿಂಪಿಕ್ಸ್ಗೆ 'ಎ' ಸ್ಟ್ಯಾಂಡರ್ಡ್ ಅರ್ಹತೆ ಪಡೆದ ಸಾಜನ್!
"ಒಂದಕ್ಕಿಂತ ಹೆಚ್ಚು ಬಾರಿ ಅಂದರೆ ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದೇನೆ ಎಂದು ಕರೆಸಿಕೊಳ್ಳುವುದೇ ಹಿತಾನುಭವ ನೀಡುತ್ತಿದೆ. ವಿಶ್ವದ ಅತಿ ದೊಡ್ಡ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದೇ ಬಹುದೊಡ್ಡ ಗೌರವ. ಕೆಲವೇ ಕ್ರೀಡಾಪಟುಗಳಿಗೆ ಇದು ಸಾಧ್ಯ. ಈ ಅವಕಾಶವನ್ನು ಬಳಸಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ. ಟೋಕಿಯೋ ಅಂಗಣಕ್ಕೆ ಕಾಲಿಡಲು ಕಾತುರಳಾಗಿದ್ದೇನೆ," ಎಂದು ಅದಿತಿ ತಮ್ಮ ಸಂಭ್ರಮವನ್ನು ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಹಂಚಿಕೊಂಡಿದ್ದಾರೆ.
 "ಈ ಬಾರಿ ಟೋಕಿಯೋ ಒಲಿಂಪಿಕ್ಸ್ಗೆ ಆಯ್ಕೆಯಾಗುತ್ತೇನೆ ಎಂದು ಗೊತ್ತಿತ್ತು. 2016ರ ರಿಯೋ ಒಲಿಂಪಿಕ್ಸ್ಗೆ ಬಹಳಾ ಕಷ್ಟಪಟ್ಟು ಅರ್ಹತೆ ಪಡೆದಿದ್ದೆ. ಏಕೆಂದರೆ 2105ರಲ್ಲಿ ನನಗೆ ವಿಶ್ವ ಶ್ರೇಯಾಂಕದ ಟೂರ್ನಿಗಳು ಹೆಚ್ಚು ಸಿಕ್ಕಿರಲಿಲ್ಲ," ಎಂದು ಅದಿತಿ ಹೇಳಿಕೊಂಡಿದ್ದಾರೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಲೇಜು ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಲಸಿಕೆ: ಡಿಸಿಎಂ