Select Your Language

Notifications

webdunia
webdunia
webdunia
webdunia

ಇಂದಿನ ಪಾಸಿಟಿವಿಟಿ ರೇಟ್ ಎಷ್ಟು?

ಇಂದಿನ ಪಾಸಿಟಿವಿಟಿ  ರೇಟ್ ಎಷ್ಟು?
ಬೆಂಗಳೂರು , ಶುಕ್ರವಾರ, 18 ಫೆಬ್ರವರಿ 2022 (08:06 IST)
ಕರ್ನಾಟಕ ರಾಜ್ಯದಲ್ಲಿ ಗುರುವಾರ (ಫೆಬ್ರವರಿ 17) ಹೊಸದಾಗಿ 1,579 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ.
ರಾಜ್ಯದಲ್ಲಿ ಈವರೆಗೆ 39,33,115 ಜನರಿಗೆ ಕೊರೊನಾ ದೃಢಪಟ್ಟಂತಾಗಿದಗ್ದು, ಸೋಂಕಿತರ ಪೈಕಿ 38,73,580 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಗುರುವಾರ ಕೊರೊನಾ ಸೋಂಕಿನಿಂದ 23 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕೊವಿಡ್ ನಿಯಂತ್ರಣಕ್ಕೆ ವಿಧಿಸಿದ್ದ ನಿಷೇಧಾಜ್ಞೆ ಮುಂದುವರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಫೆ.28ರವರೆಗೂ ನಿಷೇಧಾಜ್ಞೆ ಮುಂದುವರಿಸಿ ಆದೇಶ ನೀಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಬಗ್ಗೆ ಆದೇಶ ನೀಡಿದ್ದಾರೆ.

ಕೊವಿಡ್ ನಿಬಂಧನೆಗಳು ಯಥಾವತ್ ಮುಂದುವರಿಯಲಿವೆ. ಯಾವುದೇ ರೀತಿಯ ಧರಣಿ, ಮೆರವಣಿಗೆಗೆ ಅವಕಾಶವಿಲ್ಲ. ನಿಬಂಧನೆಗಳನ್ನ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

7ನೇ ವೇತನ ಆಯೋಗಕ್ಕೆ ಸಮಿತಿ ರಚನೆ