Webdunia - Bharat's app for daily news and videos

Install App

ಗರ್ಭಿಣಿಯರಿಗೆ ಜೀಕಾ ಅಪಾಯ ಹೆಚ್ಚು!

Webdunia
ಶುಕ್ರವಾರ, 23 ಜುಲೈ 2021 (12:15 IST)
Zika Virus: ಕೋವಿಡ್ ನಂತರ ಅತಿ ಹೆಚ್ಚು ಭಯ ಹುಟ್ಟಿಸುತ್ತಿರುವ ಮತ್ತೊಂದು ರೋಗವೆಂದರೆ ಜಿಕಾ ವೈರಸ್.. ಈಗಾಗಲೇ ಕೇರಳ, ಮಹಾರಾಷ್ಟ್ರಗಳಲ್ಲಿ ಹೆಚ್ಚು ಜಿಕಾ ವೈರಸ್ ಪ್ರಕರಣ ದಾಖಲಾಗುತ್ತಿದ್ದು, ಅಲ್ಲಿನ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ.. ಈ ಸಾಂಕ್ರಮಿಕ ರೋಗಕ್ಕೆ ಮದ್ದಿಲ್ಲ.

ಅದರಲ್ಲೂ ಈ ವೈರಸ್ ಗರ್ಭಿಣಿಯರಿಗೆ ಹೆಚ್ಚು ಅಪಾಯಕಾರಿ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ. ಜಿಕಾ ವೈರಸ್ ತಡೆಗಟ್ಟಲು ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹಿರಿಯ ಪ್ರಸೂತಿ ತಜ್ಞೆ ಡಾ. ಗಾಯತ್ರಿ ಡಿ. ಕಾಮತ್ ವಿವರಿಸಿದ್ದಾರೆ.
ಭ್ರೂಣದ ಮೆದುಳಿನ ಮೇಲೆ ಪರಿಣಾಮ: ಹೌದು, ಸೊಳ್ಳೆಗಳ ಮೂಲಕ ಹರಡುವ ಈ ವೈರಸ್ ಹೆಚ್ಚು, ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ. ಗರ್ಭಿಣಿಯರು ಈ ಜಿಕಾ ವೈರಸ್ಗೆ ತುತ್ತಾದರೆ ಮೊದಲು ಸಮಸ್ಯೆಯಾಗುವುದೇ ಹುಟ್ಟುವ ಮಗುವಿಗೆ. ಈ ವೈರಸ್ನಿಂದ ಭ್ರೂಣಗಳ ಮೆದುಳಿಗೆ ಕ್ರಮಿಸಿ ಮೈಕ್ರೋ ಸೆಫಾಲಿ ಎಂಬ ಗಂಭೀರ ಜನ್ಮ ದೋಷಕ್ಕೆ ಕಾರಣವಾಗಬಹುದು. ಅಂದರೆ ಮಗುವಿನ ಮೆದುಳಿನ ಬೆಳವಣಿಗೆ ಕ್ಷೀಣಿಸಿ, ಮಗು ಆಟಿಸಂ ನಂಥಹ ರೋಗದೊಂದಿಗೆ ಹುಟ್ಟುವ ಸಾಧ್ಯತೆ ಹೆಚ್ಚು. ಜೊತೆಗೆ, ಶ್ರವಣ ಹಾಗೂ ದೃಷ್ಟಿ ದೋಷ, ಕೀಲುಗಳಲ್ಲಿ ಚಲನೆ ಇಲ್ಲದಿರುವುದು, ನರ ಬೆಳವಣಿಗೆಯಲ್ಲಿ ವೈಪರಿತ್ಯ ಸೇರಿದಂತೆ ಹಲವು ರೀತಿಯ ರೋಗಗಳಿಗೆ ಈ ವೈರಸ್ ಕಾರಣವಾಗಬಹುದು. ಗರ್ಭಿಣಿಯಲ್ಲಿ ರೋಗ ನಿರೋಧ ಶಕ್ತಿ ಕಡಿಮೆ ಇದ್ದರಂತೂ ಶಿಶುವಿನ ಪ್ರಾಣಕ್ಕೂ ಎರವಾಗಬಹುದು.
ಚಿಕಿತ್ಸೆ ಏನು?:
ಪ್ರಸ್ತುತ ಜಿಕಾ ವೈರಸ್ಗೆ ಯಾವುದೇ ನಿಗದಿತ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲ. ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಜಿಕಾ ವೈರಸ್ನಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಕಡಿಮೆ ಇದೆ. ಆದರೆ, ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಇನ್ನೂ ಅವಕಾಶ ಇಲ್ಲವಾದ್ದರಿಂದ ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳಿತು.
ಮುನ್ನೆಚ್ಚರಿಕೆ:
 ಜಿಕಾ ವೈರಸ್ ಹಗಲಿನಲ್ಲಿ ಬರುವ ಸೊಳ್ಳೆಗಳು ಕಚ್ಚುವುದರಿಂದ ಹರಡಲಿದೆ. ಈಗ ಮಳೆಗಾಲವಾದ್ದರಿಂದ ಸೊಳ್ಳೆ ಉತ್ಪತ್ತಿ ಸಹ ಹೆಚ್ಚು. ಹೀಗಾಗಿ ಈ ಸಮಯದಲ್ಲಿ ಅತಿ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆ ನಿಂವಾರಕ ಕ್ರೀಮ್ಗಳ ಬಳಕೆ, ಮೈ ತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಸುವುದರಿಂದ ಸಾಧ್ಯವಾದಷ್ಟು ತಡೆಗಟ್ಟಬಹುದು. ಮುಖ್ಯವಾಗಿ, ಈ ಕಾಯಿಲೆ ಇರುವ ಜಾಗಕ್ಕೆ ತೆರಳಿದಾಗ ಪತಿಯೊಂದಿಗೆ ಸಂಭೋಗ ನಡೆಸುವ ಕ್ರಿಯೆ ನಡೆಸಬಾರದು. ಮಳೆಗಾಲದಲ್ಲಿ ಗರ್ಭಧರಿಸುವುದು ಒಳ್ಳೆಯದಲ್ಲ.
ಸರ್ಕಾರ ಎಚ್ಚರಿಕೆ ವಹಿಸಲಿ:
ವಿಪರೀತ ಸೊಳ್ಳೆಗಳಿರುವ ಪ್ರದೇಶ, ಪಾರ್ಕ್ ನಂತಹ ಜಾಗದಲ್ಲಿ ಸರ್ಕಾರವು ಸೊಳ್ಳೆ ನಿವಾರಕ ಔಷಧಿ ಸಿಂಪಡಣೆ ಮಾಡುವತ್ತ ಹೆಚ್ಚು ಗಮನಹರಿಸಬೇಕು. ಎಲ್ಲಾ ಪ್ರದೇಶಗಳಿಗೆ ಆರೋಗ್ಯ ಕಾರ್ಯಕರ್ತರನ್ನು ಕಳುಹಿಸಿ ಗರ್ಭಿಣಿಯ ಆರೋಗ್ಯದ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜೊತೆಗೆ, ಈ ಅವಧಿಯಲ್ಲಿ ಗರ್ಭಧಾರಣೆ ನಿಲ್ಲಿಸುವ ಬಗ್ಗೆ ಜಾಗೃತಿ ಮೂಡಿಸಬೇಕು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments