Publish Date: Tue, 25 Jan 2022 (14:55 IST)
Updated Date: Tue, 25 Jan 2022 (18:59 IST)
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಜನವರಿ 28ಕ್ಕೆ 6 ತಿಂಗಳು ಪೂರ್ಣಗೊಳ್ಳಲಿದ್ದು, ಹೈಕಮಾಂಡ್ ರಿಪೋರ್ಟ್ ಕಾರ್ಡ್ ತರಿಸಿಕೊಂಡಿದೆ.
ಈ ರಿಪೋರ್ಟ್ ಕಾರ್ಡ್ ಆಧರಿಸಿ ವರಿಷ್ಠರು ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಲಭ್ಯವಾಗಿದೆ.
ಸಚಿವರ ಕಾರ್ಯವೈಖರಿಯನ್ನು ಸಚಿವ ಸಂಪುಟ ಪುನಾರಚನೆಗೂ ಮುನ್ನ ಪರಿಶೀಲನೆ ನಡೆಸಲಾಗುವುದು. ಇಲಾಖೆ, ಪಕ್ಷದ ಚಟುವಟಿಕೆ, ಸರ್ಕಾರದ ಸಮರ್ಥನೆ ಹೀಗೆ ಹಲವು ಆಯಾಮಗಳಲ್ಲಿ ಮಾಹಿತಿ ಪಡೆದಿರುವ ವರಿಷ್ಠರು ವರದಿ ಆಧರಿಸಿ ಕ್ರಿಯಾಶೀಲರಲ್ಲದ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.