Publish Date: Tue, 25 Jan 2022 (13:34 IST)
Updated Date: Tue, 25 Jan 2022 (18:37 IST)
ನವದೆಹಲಿ : ನಟಿ ಊರ್ವಶಿ ರೌಟೇಲಾರನ್ನು ಮಿಷನ್ ಪಾನಿ ಜಲಶಕ್ತಿ, ಜಲ ಸಂರಕ್ಷಣೆ ಅಭಿಯಾನದ ರಾಯಭಾರಿಯಾಗಿ ಅಯ್ಕೆ ಮಾಡಲಾಗಿದೆ.
ಊರ್ವಶಿ ರೌಟೇಲಾ ಫೌಂಡೇಶನ್ ಮೂಲಕವಾಗಿ ನೀರಿನ ಬಿಕ್ಕಟ್ಟಿನ ವಿರುದ್ಧ ಹೋರಾಡಿದ್ದಾರೆ. ತಮ್ಮ ಪೋಷಕರೊಂದಿಗೆ ಸ್ಥಾಪಿಸಿದ್ದ ಸಂಸ್ಥೆ ಉತ್ತರಾಖಂಡ್, ಪೌರಿ, ಗರ್ವಲ್ ಮತ್ತು ಹರಿದ್ವಾರದ ನೂರಾರು ಸಮುದಾಯಗಳಿಗೆ ಶುದ್ಧ ಮತ್ತು ಸುರಕ್ಷಿತ ನೀರು ಪಡೆಯಲು ಸಹಾಯ ಮಾಡಿದೆ.
ಈ ಎಲ್ಲವನ್ನು ಗಮನಿಸಿದ ಕೇಂದ್ರ ಸರ್ಕಾರ ಊರ್ವಶಿಯವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ. ನನ್ನ ಜೀವನದಲ್ಲಿ ಈ ಎಲ್ಲಾ ವಿಶ್ವ ದರ್ಜೆಯ ಅವಕಾಶಗಳನ್ನು ಸ್ವೀಕರಿಸುತ್ತಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಕೇಂದ್ರ ಸರ್ಕಾರ ನನಗೆ ಹೊಸ ಅವಕಾಶವನ್ನು ನೀಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖವತ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.