Select Your Language

Notifications

webdunia
webdunia
webdunia
webdunia

ಜಾಗತಿಕ ನಿರ್ಬಂಧಕ್ಕೆ ಒಳಗಾಗಿರುವ ದೇಶಗಳ ಪಟ್ಟಿ ಹೀಗಿದೆ?

ಜಾಗತಿಕ ನಿರ್ಬಂಧಕ್ಕೆ ಒಳಗಾಗಿರುವ ದೇಶಗಳ ಪಟ್ಟಿ ಹೀಗಿದೆ?
ನವದೆಹಲಿ , ಮಂಗಳವಾರ, 8 ಮಾರ್ಚ್ 2022 (16:44 IST)
ನವದೆಹಲಿ : ಜಾಗತಿಕವಾಗಿ ನಿರ್ಬಂಧಗಳಿಗೆ ಒಳಗಾಗಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಹೆಚ್ಚಿನ ನಿರ್ಬಂಧಕ್ಕೊಳಗಾದ ರಾಷ್ಟ್ರವಾಗಿ ರಷ್ಯಾ ಹೊರಹೊಮ್ಮಿದೆ.
 
ಉಕ್ರೇನ್ ಮೇಲೆ ಯುದ್ಧ ಸಾರಿದ ನಂತರ ಜಾಗತಿಕವಾಗಿ ನಿರ್ಬಂಧಕ್ಕೊಳಗಾದ ರಾಷ್ಟ್ರಗಳಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ.

Castellum.ai ಪ್ರಕಾರ ಫೆ.22ಕ್ಕೂ ಮುಂಚೆ ರಷ್ಯಾ ಮೇಲೆ 2,754 ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ದೇಶದ ಮೇಲೆ ಹೊಸದಾಗಿ 2,778 ನಿರ್ಬಂಧಗಳನ್ನು ಜಾಗತಿಕ ಮಟ್ಟದಲ್ಲಿ ವಿಧಿಸಲಾಗಿದೆ.

ಇರಾನ್

ಕ್ಯಾಸ್ಟಲಮ್.ಎಐ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ಜಾಗತಿಕ ನಿರ್ಬಂಧಗಳಲ್ಲಿ ಇರಾನ್ ಎರಡನೇ ಸ್ಥಾನದಲ್ಲಿದೆ.

ಈ ದೇಶದ ವಿರುದ್ಧ 3,616 ನಿರ್ಬಂಧಗಳನ್ನು ಹೇರಲಾಗಿದೆ. ಪರಮಾಣು ಕಾರ್ಯಚಟುವಟಿಕೆ ಹಾಗೂ ಭಯೋತ್ಪಾದನೆಗೆ ಸಹಕಾರ ನೀಡಿದ ಆರೋಪದ ಮೇಲೆ ಈ ನಿರ್ಬಂಧಗಳನ್ನು ಹಾಕಲಾಗಿದೆ. 

ಸಿರಿಯಾ

ಅಂತರ್ಯುದ್ಧದ ಕಾರಣಕ್ಕಾಗಿ ಯೂರೋಪ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್ ದೇಶಗಳು ಸಿರಿಯಾ ವಿರುದ್ಧ ಹಲವು ನಿರ್ಬಂಧಗಳನ್ನು ಹಾಕಿವೆ.

2011ರ ನಂತರ ಈ ನಿರ್ಬಂಧಗಳನ್ನು ವಿಧಿಸಲಾಗಿದೆ. ಸಿರಿಯಾ ವಿರುದ್ಧ 2,608 ನಿರ್ಬಂಧಗಳಿವೆ.

ಉತ್ತರ ಕೊರಿಯಾ

ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಾಚರಣೆಗಳಿಗಾಗಿ ಉತ್ತರ ಕೊರಿಯಾ ಮೇಲೆ 2006ರಿಂದ ಯೂರೋಪ್ ಒಕ್ಕೂಟ ಅನೇಕ ನಿರ್ಬಂಧಗಳನ್ನು ವಿಧಿಸಿದೆ. 2,077 ನಿರ್ಬಂಧಗಳು ಈ ದೇಶದ ಮೇಲಿದೆ.

ವೆನಿಜುವೆಲಾ

ಕ್ಯಾಸ್ಟಲಮ್.ಎಐ ಪ್ರಕಾರ, ದಕ್ಷಿಣ ಅಮೆರಿಕ ದೇಶವಾದ ವೆನಿಜುವೆಲಾ ವಿರುದ್ಧ 651 ನಿರ್ಬಂಧಗಳನ್ನು ವಿಧಿಸಲಾಗಿದೆ.

ಮಡುರೊ ಆಡಳಿತಕ್ಕೆ ಸಂಬಂಧಿಸಿದ ವ್ಯವಹಾರಗಳು ಮತ್ತು ತೈಲ ಘಟಕಗಳ ಮೇಲೆ 2017ರಿಂದ ಈವರೆಗೂ ಅಮೆರಿಕ ಈ ನಿರ್ಬಂಧಗಳನ್ನು ಹೇರಿದೆ.

ಮ್ಯಾನ್ಮಾರ್

ಈ ದೇಶ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಿಲಿಟರಿ ದಂಗೆಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಿಂದ ನಿರ್ಬಂಧಗಳನ್ನು ಎದುರಿಸಿದೆ. ಮ್ಯಾನ್ಮಾರ್ ವಿರುದ್ಧ 510 ನಿರ್ಬಂಧ.

ಕ್ಯೂಬಾ

208 ನಿರ್ಬಂಧಗಳನ್ನು ಹೊಂದಿರುವ ಕ್ಯೂಬಾ, ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಕ್ಯೂಬಾ 60 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕ ನಿರ್ಬಂಧಗಳ ಅಡಿಯಲ್ಲಿದೆ.

ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರು ಕ್ಯೂಬಾವನ್ನು ಪ್ರಜಾಪ್ರಭುತ್ವೀಕರಣದ ಕಡೆಗೆ ಮತ್ತು ಮಾನವ ಹಕ್ಕುಗಳಿಗೆ ಹೆಚ್ಚಿನ ಗೌರವವನ್ನು ನೀಡುವವರೆಗೆ ನಿರ್ಬಂಧ ಹಾಕುತ್ತೇವೆ ಎಂದಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು?