ಬೆಂಗಳೂರು : ಇಸ್ರೋದ ಕೇಂದ್ರ ಕಚೇರಿ ಇರುವ ಬೆಂಗಳೂರು ಚಂದ್ರಯಾನ -3ರ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ.
ರಾಕೆಟ್, ನೌಕೆಯ ಅಭಿವೃದ್ಧಿಯಿಂದ ಶುರುವಾಗಿ ಅದರ ಸಂಪೂರ್ಣ ನಿರ್ವಹಣೆ ಹಾಗೂ ಬಾಹ್ಯಾಕಾಶದಲ್ಲಿ ನೌಕೆಯ ಮೇಲೆ ಕಣ್ಗಾವಲಿರಿಸಿರುವುದು ಪೀಣ್ಯದಲ್ಲಿರುವ ಇಸ್ಟ್ರಾಕ್ನಿಂದ. ಈ ಕೇಂದ್ರವು ರಾಕೆಟ್ ಉಡ್ಡಯನದಿಂದ ಉಪಗ್ರಹ ಕಕ್ಷೆಗೆ ಸೇರಿಸುವುದು ಸೇರಿದಂತೆ ಅದರ ಜೀವಿತಾವಧಿಯ ಟ್ರ್ಯಾಕಿಂಗ್ ಮಾಡುತ್ತದೆ.
ಈ ಮೂಲಕ ಉಪಗ್ರಹಕ್ಕೆ ಕಮಾಂಡ್ ಮಾಡುತ್ತದೆ.ಮೋಕ್ಸ್ ಕೇಂದ್ರ ಉಡ್ಡಯನದ ಎಲ್ಲಾ ಮಾಪನಾಂಕಗಳ ಮೇಲೆ ನಿರಂತರವಾಗಿ ನಿಗಾ ಇಡುವ ಮೂಲಕ ಅವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ದಾಖಲಿಸುತ್ತದೆ.