Select Your Language

Notifications

webdunia
webdunia
webdunia
webdunia

ಭರ್ಜರಿ ಮಳೆ ಸಾಧ್ಯತೆ ‘

ಭರ್ಜರಿ ಮಳೆ ಸಾಧ್ಯತೆ ‘
ಬೆಂಗಳೂರು , ಮಂಗಳವಾರ, 31 ಮೇ 2022 (09:28 IST)
ಬೆಂಗಳೂರು : ರೈತರ ಜೀವನಾಡಿ ಎಂದೇ ಜನಜನಿತವಾಗಿರುವ ನೈಋುತ್ಯ ಮುಂಗಾರು ಕೇರಳಕ್ಕೆ ಭಾನುವಾರ ಪ್ರವೇಶಿಸಿದ್ದು, ಜೂನ್ 1ರಿಂದ ರಾಜ್ಯಕ್ಕೆ ಪ್ರವೇಶವಾಗಲಿದೆ.
 
ಜೂನ್ 2ರಂದು ಮಳೆ ಭರ್ಜರಿಯಾಗಿ ಸುರಿಯುವ ಸಾಧ್ಯತೆ ಹೆಚ್ಚಿರುವುದರಿಂದ ಕರಾವಳಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಿಗೆ ‘ಹಳದಿ ಅಲರ್ಟ್’ನೀಡಲಾಗಿದೆ.

ಮುಂಗಾರು ಮಳೆ ವಾಡಿಕೆಗಿಂತ (ಜೂನ್ 1) ಮೂರು ದಿನ ಮೊದಲೇ ಮುಂಗಾರು ಕೇರಳ ಪ್ರವೇಶಿಸಿದೆ. ಮುಂಗಾರು ಕೇರಳಕ್ಕೆ ಕಾಲಿಟ್ಟನಾಲ್ಕೈದು ದಿನದಲ್ಲಿ ರಾಜ್ಯವನ್ನು ಪ್ರವೇಶಿಸುವುದು ಮಾಮೂಲಿ. ಆದ್ದರಿಂದ ಜೂನ್ ಮೊದಲ ವಾರದಲ್ಲಿ ರಾಜ್ಯಾದ್ಯಾಂತ ಮುಂಗಾರು ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿ ಉತ್ತಮ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದೆ. ಸೋಮವಾರ ಅಥವಾ ಮಂಗಳವಾರ ಇಲಾಖೆ ಇನ್ನೊಂದು ಮುನ್ಸೂಚನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ.

ಇದರಲ್ಲಿ ಮುಂಗಾರು ಮಳೆಯ ಆರಂಭದ ಕೆಲವು ದಿನಗಳ ಚಲನ ವಲನದ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅನಾಥವಾಗಿ ಬಿದ್ದಿದ್ದ ಶವಕ್ಕೆ ತಲೆಯೇ ಇರಲಿಲ್ಲ!