Publish Date: Sun, 09 Oct 2022 (07:12 IST)
Updated Date: Sun, 09 Oct 2022 (07:49 IST)
ತಿರುಪತಿ : ತಿರುಪತಿಯಲ್ಲಿ ಭಕ್ತಸಾಗರ ತುಂಬಿ ತುಳುಕುತ್ತಿದೆ. ತಿರುಪತಿ ಬೆಟ್ಟದಲ್ಲಿ 6 ಕಿ.ಮೀ.ವರೆಗೆ ಭಕ್ತರ ಸಾಲು ನಿಂತಿದ್ದು, ತಿಮ್ಮಪ್ಪನ ದರ್ಶನ ಪಡೆಯಬೇಕು ಅಂದರೆ 50 ಗಂಟೆಗಳ ಕಾಲ ಕಾಯಬೇಕಿದೆ.
ಹೌದು.. ಎಲ್ಲಿ ನೋಡಿದ್ರೂ ಜನವೋ ಜನ, ದೇಗುಲದ ಕಾಂಪ್ಲೆಕ್ಸ್ನಿಂದ ಆಚೆ, ದೇವಾಲಯದ ಮುಂಭಾಗ, ಲಡ್ಡುಗೂ ಕ್ಯೂ ಮುಡಿ ಸೇವೆಗೂ ಕ್ಯೂ ಲಗೇಜ್ ಕೌಂಟರ್ನಲ್ಲೂ ಕ್ಯೂ ಎಲ್ಲಿ ನೋಡಿದ್ರೂ ಲಕ್ಷಾಂತರ ಭಕ್ತರು.
ಇದು ಆಂಧ್ರಪ್ರದೇಶದ ತಿರುಪತಿ ತಿರುಮಲದ ಸ್ಥಿತಿಯಾಗಿದೆ. ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ತಿರುಮಲದಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ. ಈ ಭಕ್ತರನ್ನು ನಿಯಂತ್ರಿಸಲು ಟಿಟಿಡಿ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ.
ಜನರು ಹೆಚ್ಚಿರುವ ಹಿನ್ನೆಲೆಯಲ್ಲಿ ತಿರುಮಲನ ದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಆದರೂ ಉಚಿತ ದರ್ಶನದ ಸಾಲಿನಲ್ಲಿ 2 ಕಿ.ಮೀವರೆಗೆ ಭಕ್ತರು ನಿಂತಿದ್ದಾರೆ.