ಟೋಕಿಯೋ : ಜಪಾನ್ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ ಬುಧವಾರ ಸಂಜೆ ಸಂಭವಿಸಿದೆ.
ಭಾರೀ ತೀವ್ರತೆಯ ಭೂಕಂಪದಿಂದ ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಉತ್ತರ ಜಪಾನ್ನ ಫುಕುಶಿಮಾದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಮುದ್ರದ 60 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ.
2011ರಲ್ಲಿ ಇದೇ ಪ್ರದೇಶದಲ್ಲಿ 9.0 ತೀವ್ರತೆಯ ಭಾರೀ ಭೂಕಂಪ ಸಂಭವಿಸಿತ್ತು. ಭೂಕಂಪದ ಪ್ರಭಾವದಿಂದ ಜಪಾನ್ನಲ್ಲಿ ಭಾರೀ ಸುನಾಮಿ ಸಂಭವಿಸಿ ಮಾರಣ ಹೋಮವೇ ನಡೆದಿತ್ತು.
ಇದೀಗ 11 ವರ್ಷಗಳ ಬಳಿಕ ನಡೆದಿರುವ ಭೂಕಂಪ ಹಳೆಯ ಕಹಿ ಘಟನೆಯನ್ನು ನೆನಪಿಸುವಂತಿದೆ.