Select Your Language

Notifications

webdunia
webdunia
webdunia
webdunia

ಭೂಕಂಪ ; ಬೆಚ್ಚಿಬಿದ್ಧ ಗ್ರಾಮಸ್ಥರು!

ಭೂಕಂಪ ; ಬೆಚ್ಚಿಬಿದ್ಧ ಗ್ರಾಮಸ್ಥರು!
ಚಿಕ್ಕಬಳ್ಳಾಪುರ , ಗುರುವಾರ, 23 ಡಿಸೆಂಬರ್ 2021 (13:47 IST)
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮತ್ತೆ ಎರಡು ಬಾರಿ ಭೂಮಿ ಕಂಪಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ, ಬೈಯಪ್ಪನಹಳ್ಳಿ, ಬಂಡಹಳ್ಳಿ, ಪೆರೇಸಂದ್ರ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಮಿ ಕಂಪನವಾಗಿದೆ.
 
ನಿನ್ನೆ ಮಂಡಿಕಲ್, ಭೋಗಪರ್ತಿ ಸುತ್ತಮುತ್ತ ಭೂಕಂಪ ಸಂಭವಿಸಿತ್ತು. ಭೂ ಕಂಪನವಾಗಿ ಮನೆಯಲ್ಲಿದ್ದ ಪಾತ್ರೆ, ಸಾಮಾನುಗಳು ಅದುರಿಬಿದ್ದಿವೆ.

ಮಂಡಿಕಲ್ ಗ್ರಾಮದಲ್ಲಿ ಎರಡು ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದೆ. ಭೂ ಕಂಪನದಿಂದ ಹೈಸ್ಕೂಲ್ ವಿಸ್ಯಾರ್ಥಿಗಳು ಹೊರಗೆ ಓಡಿ ಬಂದಿದ್ದಾರೆ.

ಮಂಡಿಕಲ್ ಸರ್ಕಾರಿ ಹೈಸ್ಕೂಲ್ನಲ್ಲಿ ಈ ಘಟನೆ ನಡೆದಿದ್ದು, ಮತ್ತೆ ಶಾಲೆಯ ಒಳಗೆ ಹೋಗಲು ವಿದ್ಯಾರ್ಥಿಗಳ ಹಿಂದೇಟು ಹಾಕಿದ್ದಾರೆ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ಚಿಕ್ಕಬಳ್ಳಾಫುರ ತಾಲೂಕಿನ ಮಂಡಿಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಜಿಲ್ಲೆಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು ರಿಕ್ಟರ್ ಮಾಪಕದಲ್ಲಿ 2.9 ರಿಂದ 3 ರಷ್ಟು ತೀವ್ರತೆ ದಾಖಲಾಗಿತ್ತು. ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿ ಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಸದ್ದು ಕೇಳಿ ಬಂದಿತ್ತು.

ಜಿಲ್ಲೆಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು ಲಘು ಭೂಕಂಪವಾಗಿರುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ (ಕೆ.ಎಸ್.ಎನ್.ಡಿ.ಎಂ.ಸಿ.) ಸ್ಪಷ್ಟ ಪಡಿಸಿತ್ತು. ಇಂದು ಮತ್ತೊಮ್ಮೆ ಭೂ ಕಂಪನವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸೆಲ್ಪ್ ಡಿಫೆನ್ಸ್ ತರಬೇತಿ!