Publish Date: Tue, 06 Sep 2022 (08:33 IST)
Updated Date: Tue, 06 Sep 2022 (09:02 IST)
ಬೆಂಗಳೂರು : ಬಿಪಿಎಲ್ ಕಾರ್ಡ್ ಹೊಂದಿರುವ ಎಸ್ಸಿ, ಎಸ್ಟಿ ಕುಟುಂಬಗಳ ಗೃಹ ಬಳಕೆಗೆ ಮಾಸಿಕ 75 ಯುನಿಟ್ ಉಚಿತ ವಿದ್ಯುತ್ ನೀಡುವ ಸಂಬಂಧ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಹೊರಡಿಸಿದ್ದ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಹಿಂಪಡೆದಿದೆ. ಆದರೆ ಯಾವ ಕಾರಣಕ್ಕೆ ಆದೇಶ ವಾಪಸ್ ಪಡೆಯಲಾಗಿದೆ ಎಂಬ ಬಗ್ಗೆ ಸ್ಪಷ್ಟ ಕಾರಣ ನೀಡಿಲ್ಲ.
SC, ST ಕುಟುಂಬಗಳಿಗೆ ಮೊದಲ 75 ಯುನಿಟ್ ವಿದ್ಯುತ್ ಉಚಿತ ಒದಗಿಸಲಾಗುವುದು ಎಂದು ಘೋಷಣೆಯಲ್ಲಿ ತಿಳಿಸಿತ್ತು.
ಆದರೆ ಆದೇಶ ಹೊರಡಿಸಿ 10 ದಿನಗಳಲ್ಲಿ ಸರ್ಕಾರ ಆದೇಶವನ್ನು ವಾಪಸ್ ಪಡೆದುಕೊಂಡಿದೆ.