Publish Date: Wed, 16 May 2018 (18:47 IST)
Updated Date: Wed, 16 May 2018 (18:57 IST)
ಬೆಂಗಳೂರು: ನಾಳೆ ಯಾವ ಕ್ಷಣದಲ್ಲಿ ಬೇಕಾದರೂ ಪ್ರಮಾಣ ವಚನಕ್ಕೆ ಸಿದ್ಧರಾಗಿ ಎಂದು ರಾಜಭವನದ ಶಿಷ್ಟಾಚಾರ ಇಲಾಖೆಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ನಾಳೆ ಪ್ರಮಾಣ ವಚನ ಸಮಾರಂಬಕ್ಕೆ ಸಿದ್ಧರಾಗಿ ಎಂದು ರಾಜಭವನದಿಂದ ಡಿಪಿಆರ್ ಶಿಷ್ಟಾಚಾರ ವಿಭಾಗಕ್ಕೆ ಈ ಬಗ್ಗೆ ಸೂಚನೆ ಸಿಕ್ಕಿದೆ ಎನ್ನಲಾಗಿದೆ.
ಆದರೆ ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಸೂಚನೆ ಸಿಕ್ಕಿಲ್ಲ ಎನ್ನಲಾಗಿದೆ. ರಾಜಭವನದ ಸೂಚನೆಯ ನಿರೀಕ್ಷೆಯಲ್ಲಿ ಅವರಿದ್ದಾರೆ ಎನ್ನಲಾಗಿದೆ. ಆದರೆ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಇನ್ನೂ ಕುತೂಹಲವಾಗಿಯೇ ಉಳಿದುಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.