Select Your Language

Notifications

webdunia
webdunia
webdunia
webdunia

50 ಸರ್ಕಾರಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ : ಸಿಎಂ

50 ಸರ್ಕಾರಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ : ಸಿಎಂ
ಬೆಂಗಳೂರು , ಶನಿವಾರ, 24 ಸೆಪ್ಟಂಬರ್ 2022 (14:27 IST)
ಬೆಂಗಳೂರು : ರಾಜ್ಯ ಸರ್ಕಾರ ನೂತನವಾಗಿ 50 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅನುಮತಿ ನೀಡಿದ್ದು, ಅದರಲ್ಲಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ.

ಒಟ್ಟು 50 ಕಾಲೇಜುಗಳ ಪೈಕಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ. ಈ 12ರ ಪೈಕಿ 9 ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ನೀಡಲಾಗಿದೆ.

ನೂತನವಾಗಿ ಮಂಜೂರಾದ ಕಾಲೇಜುಗಳಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಗೋಳ ಗ್ರಾಮ, ಹಿರೆಮುಗದೂರು, ಅಲ್ಲಿಪೂರ ಹಾಗೂ ಶಿಗ್ಗಾಂವಿಯ ಬಂಕಾಪುರ, ಕೋಣನಕೇರಿ, ಹಿರೇಬೆಂಡಿಗೇರಿ, ಹೊಸೂರು-ಯತ್ನಳ್ಳಿ, ಬಸವನಾಳ ಸೇರಿವೆ. 

ಇನ್ನುಳಿದಂತೆ ಉತ್ತರ ಕನ್ನಡ 2, ಕೊಪ್ಪಳ 9, ಮೈಸೂರು 2, ಚಿತ್ರದುರ್ಗ 1, ರಾಯಚೂರು 3, ಯಾದಗಿರಿ 2, ದಾವಣಗೆರೆ 4, ಕಲಬುರಗಿ 2, ವಿಜಯಪುರ 3, ಬೆಳಗಾವಿ 7, ಬಾಗಲಕೋಟೆ 2, ಹಾಗೂ ಬೆಂಗಳೂರು ದಕ್ಷಿಣಕ್ಕೆ ಒಂದು ಕಾಲೇಜನ್ನು ಮಂಜೂರು ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಗುಜುರಿ ನೀತಿ..!!