Select Your Language

Notifications

webdunia
webdunia
webdunia
webdunia

ಸರ್ಕಾರಿ ನೌಕರರೇ ಹುಷಾರ್!?

ಸರ್ಕಾರಿ ನೌಕರರೇ ಹುಷಾರ್!?
ಬೆಂಗಳೂರು , ಗುರುವಾರ, 16 ಡಿಸೆಂಬರ್ 2021 (08:27 IST)
ಬೆಂಗಳೂರು : ಸರ್ಕಾರಿ ನೌಕರರು ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಒಂದು ಪಕ್ಷದ ಪರ ಅಥವಾ ವಿರೋಧವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಸರ್ಕಾರಿ ನೌಕರರ ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ಕಡಿವಾಣ ಹಾಕಲು ಮುಂದಾಗಿದೆ.
 
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕಕರು ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪರ ಅಥವಾ ವಿರೋಧವಾಗಿ ಲೇಖನ, ಅಭಿಪ್ರಾಯ, ವೀಡಿಯೋಗಳನ್ನು ಹಂಚಿಕೊಳ್ಳುವುದನ್ನು ಸರ್ಕಾರ ಗಮನಿಸಿದೆ.

ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕಕರು ಪ್ರದರ್ಶಿಸುವ ವರ್ತನೆಯು ಕೂಡ ರಾಜ್ಯ ನಾಗರಿಕ ಸೇವಾ(ನಡತೆ) ನಿಮಯಗಳು, 2021ರ ವ್ಯಾಪ್ತಿಗೆ ಒಳಪಡಿಸಿದೆ.

ಈ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮ 1957ರ ಅವಕಾಶಗಳನ್ವಯ ಶಿಸ್ತುಕ್ರಮ ಕೈಗೊಳ್ಳುವಂತೆ ಆಯಾ ಪ್ರಾಧಿಕಾರಗಳಿಗೆ ಸರ್ಕಾರ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜೀಪ್ ಖರೀದಿಸಿದ ಸಿಎಂ