ಬೆಂಗಳೂರು : ನಂದಿನಿ ಹಾಲು, ಮೊಸರಿನ ದರದಲ್ಲಿ 2 ರೂ. ಏರಿಕೆ ಮಾಡಿದ್ದು, ನಾಳೆಯಿಂದ ಅನ್ವಯವಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.
ಕೆಎಂಎಫ್ ಸಭೆ ಮುಕ್ತಾಯದ ಬಳಿಕ ಇಂದು ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಹಾಲು, ಮೊಸರಿನ ದರ ಏರಿಕೆಯ ಕುರಿತು ತಿಳಿಸಿದ್ದಾರೆ. ಈ ದರವನ್ನು ನೇರವಾಗಿ ರೈತರಿಗೆ ನೀಡಲಿದ್ದೇವೆ.
ಸೌತ್ನಲ್ಲಿ ಮಳೆ ಹೆಚ್ಚಾಗಿ ರೋಗ ಬಂದು ದನ ಸಾಯುತ್ತಿದ್ದವು, ಹಾಗಾಗಿ ಗಮನದಲ್ಲಿಟ್ಟುಕೊಂಡು ಏರಿಕೆ ಮಾಡಿದ್ದೇವೆ. ಕ್ಷೀರ ಭಾಗ್ಯ ಯೋಜನೆಯಿಂದ 10 ಕೋಟಿ ನಷ್ಟವಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇವೆ.
ಅದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡಿದರೆ ರೈತರಿಗೆ ತಲುಪಿಸಲು ಅನುಕೂಲವಾಗಲಿದೆ. ನಾಳೆ ಬೆಳಗ್ಗೆ 11 ಗಂಟೆ ಮೂಲಕ ಮಾರುಕಟ್ಟೆಗೆ ಬರುವ ಹಾಲಿನ ಪ್ಯಾಕೆಟ್ಗಳ ಮೇಲೆ ಹೊಸ ದರ ಪ್ರಿಂಟ್ ಆಗಿ ಬರಲಿದೆ ಎಂದು ತಿಳಿಸಿದರು.