Publish Date: Thu, 10 May 2018 (14:02 IST)
Updated Date: Thu, 10 May 2018 (14:05 IST)
ಬೆಂಗಳೂರು : ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಟ್ವೀಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡುವುದರ ಮೂಲಕ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಯೋಗೇಶ್ ಬಾಬು ಅವರ ಪರವಾಗಿ ಮತಯಾಚಿಸುವ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ರಮ್ಯಾ ಅವರು,’ ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ದೇಣಿಗೆ ಪಡೆಯವ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ಜಾರಿಗೆ ತರುತ್ತಿದೆ. ಈ ಮೂಲಕ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಹಣದ ಕುರಿತು ಪರದರ್ಶಕತೆಯನ್ನು ತರಲು ಯತ್ನಿಸುತ್ತಿದೆ. ಅದ್ದರಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಯೋಗೇಶ್ ಬಾಬು ಅವರಿಗೆ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.
ಹಾಗೇ ಕ್ಷೇತ್ರದಲ್ಲಿ ಯೋಗೇಶ್ ಬಾಬು ಅವರ ಪ್ರತಿಸ್ಪರ್ಧಿಯಾಗಿರುವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರನ್ನು ಟೀಕಿಸುತ್ತಾ,’ ನಮ್ಮ ಪಕ್ಷದ ಅಭ್ಯರ್ಥಿ ಡಾ. ಯೋಗೇಶ್ ಬಾಬು ಶ್ರೀ ರಾಮುಲು ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಶ್ರೀ ರಾಮುಲು ಬಳ್ಳಾರಿ ಗಣಿ ಲೂಟಿ ಮಾಡಿರುವ ಪ್ರಕಣದಲ್ಲಿ ಸಿಲುಕಿರುವ ರೆಡ್ಡಿ ಸಹೋದರರ ಸ್ನೇಹಿತರು. ಗಣಿ ಅಕ್ರಮದ ರೂವಾರಿ ಶ್ರೀರಾಮುಲು ಸೋಲಿಸಿ, ನಮ್ಮ ಅಭ್ಯರ್ಥಿ ಯನ್ನು ಗೆಲ್ಲಿಸಿ’ ಎಂದು ಕೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ