Select Your Language

Notifications

webdunia
webdunia
webdunia
webdunia

NGOಗಳ ವಿದೇಶಿ ದೇಣಿಗೆ ರದ್ದು!

NGOಗಳ ವಿದೇಶಿ ದೇಣಿಗೆ ರದ್ದು!
ನವದೆಹಲಿ , ಭಾನುವಾರ, 2 ಜನವರಿ 2022 (07:22 IST)
ನವದೆಹಲಿ : ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ನಿಯಮವನ್ನು ಪಾಲನೆ ಮಾಡದ್ದಕ್ಕೆ ಐಐಟಿ ದೆಹಲಿ ಹಳೆ ವಿದ್ಯಾರ್ಥಿಗಳ ಸಂಘ,

ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ ಸೇರಿದಂತೆ ದೇಶದ 12,000ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ನೋಂದಣಿಯನ್ನು ರದ್ದು ಗೊಳಿಸಲು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಿದೆ.

FCRA ಪರವಾನಿಗೆಯನ್ನು ನವೀಕರಣಗೊಳಿಸುವ ಸಂಬಂಧ 29 ಸೆಪ್ಟೆಂಬರ್ 2020 ರಿಂದ 31 ಡಿಸೆಂಬರ್ 2021ರ ಅವಧಿ ಒಳಗಡೆ 18,778 ಎನ್ಜಿಒಗಳು ಅರ್ಜಿ ಸಲ್ಲಿಸಿದ್ದವು.

ಆದರೆ 6 ಸಾವಿರಕ್ಕೂ ಹೆಚ್ಚು ಎನ್ಜಿಒಗಳು ಅರ್ಜಿ ಸಲ್ಲಿಸಿರಲಿಲ್ಲ. ಇದನ್ನು ಹೊರತು ಪಡಿಸಿ ಉಳಿದಂತೆ ಈಗಾಗಲೇ 5,789 ಎನ್ಜಿಒ ಮತ್ತು ಸಂಘ ಸಂಸ್ಥೆಗಳ FCRA ನೋಂದಣಿ ಪರವಾನಿಗೆ ರದ್ದಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳಿಂದ ವರದಿಯಾಗಿದೆ. 

ಚಟುವಟಿಕೆಗಳಿಗೆ ಎನ್‍ಜಿಒಗಳ ಹಣ ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ FCRA ಗೆ ತಿದ್ದುಪಡಿ ತಂದಿತ್ತು.

ವಿದೇಶದಿಂದ ಹಣ ಪಡೆಯುವ ಎನ್‍ಜಿಒಗಳು ಕಡ್ಡಾಯವಾಗಿ ದೆಹಲಿಯ ಎನ್‍ಜಿಒ ಕಚೇರಿಯಲ್ಲಿ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಿತ್ತು. ಅಲ್ಲದೇ ಹಣದ ಲೆಕ್ಕಪತ್ರ ಸಂಬಂಧ ಹಲವು ಬಿಗಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಎನ್ಜಿಒಗಳಿಗೆ ಸೂಚಿಸಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಮೂರು ತಿಂಗಳ ಬಳಿಕ ಸಾವಿರಕ್ಕೇರಿದ ಸೋಂಕು!