Select Your Language

Notifications

webdunia
webdunia
webdunia
webdunia

ಅಯೋಧ್ಯೆಯಲ್ಲಿ ಮಿನುಗುವ ಲಕ್ಷದೀಪಗಳು!

ಸರ್ಕಾರ
ದೀಪಾವಳಿಯ ದಿನ ಅಯೋಧ್ಯೆಯಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.
ಇದೇ ಸಮಯದಲ್ಲಿ ಕರ್ನಾಟಕ ಸೇರಿ ಹಲವು ಜಿಲ್ಲೆಗಳ ಕಲಾ ತಂಡಗಳು ನಗರದಲ್ಲಿ ರಾಮ್ ಲೀಲಾ ನಡೆಸಲಿವೆ. ಅಯೋಧ್ಯೆಯಲ್ಲಿ ನಿನ್ನೆಯಿಂದ ನವೆಂಬರ್ 5ರವರೆಗೆ ಅಂದರೆ, 5 ದಿನಗಳ ಕಾಲ ದೀಪಾವಳಿ ಆಚರಣೆ ಮಾಡಲಾಗುವುದು. ಇನ್ನು  3ನೇ ತಾರೀಖಿನಂದು ಸರಯೂ ನದಿ ದಡದಲ್ಲಿ 9 ಲಕ್ಷ ಹಣತೆ ಹಾಗೂ ನಗರದ ವಿವಿಧ ಭಾಗಗಳಲ್ಲಿ 3 ಲಕ್ಷ ದೀಪಗಳನ್ನು ಸಂಜೆ 6ರಿಂದ 6.30ರವರೆಗೆ ಬೆಳಗಿಸಲಾಗುವುದು. ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಅಸ್ಸಾಂ, ಪಶ್ಚಿಮ ಬಂಗಾಳದ ಕಲಾ ತಂಡಗಳು ರಾಮ್ ಲೀಲಾ ಪ್ರದರ್ಶನ ನೀಡಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿ ಮಾರಾಟದ ಕುರಿತು ಸುಪ್ರೀಕೋರ್ಟ್ ಮಹತ್ವದ ಮಾಹಿತಿ!