Webdunia - Bharat's app for daily news and videos

Install App

ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Webdunia
ಶುಕ್ರವಾರ, 27 ಏಪ್ರಿಲ್ 2018 (14:19 IST)
ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ (27) ಸಾವನ್ನಪ್ಪಿದ್ದಾರೆ. ಮತ್ತೋರ್ವ ಜೆಡಿಎಸ್ ಕಾರ್ಯಕರ್ತ ನರೇಂದ್ರ ಸ್ಥಿತಿ ಚಿಂತೆ ಜನಕವಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿ‌ರುವ ನರೇಂದ್ರನನ್ನ  ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೌರಿಬಿದನೂರು ತಾಲ್ಲೂಕಿನ ಕೋಟಾಲದಿನ್ನೆಯ ಬಾರ್ ಬಳಿ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಲಾಂಗ್ ಮಚ್ಚುಗಳಿಂದ ಕಾಂಗ್ರೆಸ್ ಬೆಂಬಲಿತ ರೌಡಿಶೀಟರ್ ರಮೇಶ್ ನಿಂದ ಜೆಡಿಎಸ್ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಮತ್ತಿಬ್ಬರು ಜೆಡಿಎಸ್ ಕಾರ್ಯಕರ್ತ ರಿಗೆ ಗಾಯಗಳಾಗಿವೆ ಎನ್ನಲಾಗಿದೆ. 
 
ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತಿಬ್ಬರು ಜೆಡಿಎಸ್  ಕಾರ್ಯಕರ್ತ ರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತ ರೌಡಿಶೀಟರ್  ರಮೇಶ್ ಗೂ ಸಣ್ಣ-ಪುಟ್ಟ ಗಾಯವಾಗಿದೆ. ಉದ್ರಿಕ್ತರು ಪೊಲೀಸ್ ಜೀಪಿನ ಮೇಲೆ ಕಲ್ಲೆಸೆದು ಗಾಜು ಜಖಂ ಮಾಡಿದ್ದಾರೆ.
 
ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡು ಪರಿಶೀಲನೆ ಮಾಡಿದ್ದಾರೆ. ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಪೊಲೀಸರ ‌ನಿಯೋಜನೆಗೊಳಿಸಲಾಗಿದೆ. ಈ ಕುರಿತುಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಲಾಸ್‌ವರ್ಕ್ ಮಾಡದಕ್ಕೆ ಕೆನ್ನೆಗೆ ಬಾರಿಸಿದ ಶಿಕ್ಷಕಿ, ಆಘಾತಗೊಂಡ ತರಗತಿಯಲ್ಲೇ ಉಸಿರು ಚೆಲ್ಲಿದ ಎಲ್‌ಕೆಜಿ ಬಾಲಕ, CCTV Video

ರಾತ್ರಿಯಾದರೂ ಮನೆಸೇರಾದ ಕುಟುಂಬ, ಹುಡುಕಾಟ ನಡೆಸಿದಾಗ ಪತ್ತೆಯಾಗಿದ್ದು, ಕರುಳು ಹಿಂಡುವ ಸ್ಥಿತಿಯಲ್ಲಿ

ಸದನ ಹಾಳು ಮಾಡ್ತಿರೋದು ಕಾಂಗ್ರೆಸ್, ನಾಳೆಯಿಂದ ಹೊಸ ರೀತಿ ಹೋರಾಟ ಶುರು ಮಾಡ್ತೀವಿ: ಆರ್ ಅಶೋಕ್

ಶಾಲೆಗಳಿಗೆ ಡಿಸಿಯಂತೆ ಎಂಟ್ರಿ ಕೊಡ್ತಿರುವ ಅಭಿಜಿತ್ ದಿಪ್ಕೆ: ಉತ್ತರ ಪ್ರದೇಶದಲ್ಲಿ ಹೊಸ ರೂಲ್ಸ್ ತಂದ ಸಿಎಂ ಯೋಗಿ

ಮುಸ್ಲಿಂ ಓಲೈಕೆಗೆ ವಂದೇ ಮಾತರಂಗೆ ಕತ್ತರಿ ಹಾಕಿದ್ದ ಕಾಂಗ್ರೆಸ್‌: ಗುಡುಗಿದ ಅಮಿತ್ ಶಾ

ಮುಂದಿನ ಸುದ್ದಿ
Show comments