ವಿಶ್ವದಲ್ಲೇ ಭಾರತ ಅತೀ ವೇಗದ ಅಭಿವೃದ್ಧಿ

Webdunia
ಶನಿವಾರ, 23 ಏಪ್ರಿಲ್ 2022 (09:42 IST)
ವಾಷಿಂಗ್ಟನ್ : ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದ ಹಾಗೂ ಕೋವಿಡ್ ಪ್ರಭಾವದಿಂದ ಇಡೀ ವಿಶ್ವವೇ ನಲುಗಿ ಹೋಗಿ, ಆರ್ಥಿಕತೆ ಕುಗ್ಗುವ ಆತಂಕದಲ್ಲಿದೆ.

ಆದರೆ ಭಾರತದ ಆರ್ಥಿಕತೆಯಲ್ಲಿ ಭಾರೀ ಪ್ರಮಾಣದ ಚೇತರಿಕೆ ಕಾಣುತ್ತಿದೆ. ಹೌದು, ಭಾರತ ಇದೀಗ ಚೀನಾವನ್ನೇ ಮೀರಿಸುವಷ್ಟು ವೇಗವಾಗಿ ಆರ್ಥಿಕತೆಯಲ್ಲಿ ಅಭಿವೃದ್ದಿ ಹೊಂದುತ್ತಿದೆ. 2022ನೇ ಇಸವಿಯಲ್ಲಿ ಭಾರತ ಶೇ.8.2 ರಷ್ಟು ಪ್ರಗತಿ ಕಾಣಲಿದೆ.

ಇದು ಜಗತ್ತಿನಲ್ಲಿಯೇ ಅತೀ ವೇಗದ ಅಭಿವೃದ್ಧಿ ಹೊಂದಲಿರುವ ಆರ್ಥಿಕತೆ ಎನಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತಿಳಿಸಿದೆ.  ಚೀನಾದ ಪ್ರಗತಿ ದರ ಶೇ.4.4 ರಷ್ಟು ಇದ್ದು, ಭಾರತ ಇದರ ದುಪ್ಪಟ್ಟು ವೇಗದಲ್ಲಿ ಅಭಿವೃದ್ದಿ ಹೊಂದುತ್ತಿದೆ.

2021ರ ಜಾಗತಿಕ ಆರ್ಥಿಕ ದರ ಶೇ.6.1 ಇದ್ದು, ಈ ವರ್ಷ ಶೇ.3.6 ಕ್ಕೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ ಎಂದು ಹೇಳಿದೆ. 

ಕೆಲವು ತಿಂಗಳ ಹಿಂದೆ ಐಎಂಎಫ್ 2022ರ ಭಾರತದ ಆರ್ಥಿಕತೆ ಶೇ.9.1 ಇರಲಿದೆ ಎಂದು ತಿಳಿಸಿತ್ತು. ಇದೀಗ ಐಎಂಎಫ್ ಈ ಅಂದಾಜನ್ನು ಪರಿಷ್ಕರಿಸಿ, ಶೇ.0.8 ರಷ್ಟು ಕಡಿಮೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಿವಮೊಗ್ಗ: ಕಾಂಗ್ರೆಸ್ ಕಾರ್ಯಕರ್ತನ ಕೈ ತುಂಡಾಗುವ ಮಟ್ಟಿಗೆ ಹಲ್ಲೆ

ಗ್ರ್ಯಾಂಡ್‌ ಮಾಸ್ಟರ್ ಆರ್ ಪ್ರಜ್ಞಾನಂದ್‌ ಜತೆ ಚೆಸ್ ಆಡಿದ ವಿಜಯ್, Video

ಉಪಮುಖ್ಯಮಂತ್ರಿ ಹುದ್ದೆಯನ್ನು ಬಯಸಿದ್ರಾಂತ್ತೆ ಈ ಸಚಿವರು, ಕೊನೆಗೂ ಅಮಾಧಾನ ಹೊರಹಾಕಿದ ಕೈ ನಾಯಕ

ಇಂದಿನಿಂದ ಕರಾವಳಿ ಭಾಗದಲ್ಲಿ ನಿರೀಕ್ಷೆಗೂ ಮೀರಿ ಹವಾಮಾನದಲ್ಲಿ ವ್ಯತ್ಯಯ, ಇಲ್ಲಿದೆ ಮಾಹಿತಿ

ಮೂರನೇ ಬಾರಿ ಸಿಎಂ ಸ್ಥಾನಕ್ಕೆ ಕೈತಪ್ಪಿದ್ದಕ್ಕೆ ಜಿ ಪರಮೇಶ್ವರ್‌ ಬೇಸರ

ಮುಂದಿನ ಸುದ್ದಿ
Show comments