Select Your Language

Notifications

webdunia
webdunia
webdunia
webdunia

ಹೊರಬಿತ್ತು ಸ್ಫೋಟಕ ಆಡಿಯೋ ! ಏನಿದು?

ಹೊರಬಿತ್ತು ಸ್ಫೋಟಕ ಆಡಿಯೋ !  ಏನಿದು?
ಕಲಬುರಗಿ , ಭಾನುವಾರ, 24 ಏಪ್ರಿಲ್ 2022 (09:02 IST)
ಕಲಬುರಗಿ : 545 ಪಿಎಸ್ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ.
 
402ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನೇ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನು ಬೇಗನೇ ಕಳುಹಿಸಿ ಎಂಬ ಹಲವಾರು ಸಂಭಾಷಣೆಗಳನ್ನು ಹೊಂದಿರುವ ಸ್ಫೋಟಕ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು, ಪಿಎಸ್ಐ ನೇಮಕಾತಿಯ ಸಂಬಂಧ ಇಬ್ಬರು ಆರೋಪಿಗಳ ಸಂಭಾಷಣೆಯಿದೆ.

ಇದರಲ್ಲಿ ಓರ್ವ ವ್ಯಕ್ತಿ ಪಿಎಸ್ಐ ಆಗಿ ಆಯ್ಕೆಯಾಗಿದ್ದಾನೆ. ಇನ್ನೋರ್ವ ವ್ಯಕ್ತಿ ಮಧ್ಯವರ್ತಿಯಾಗಿದ್ದಾನೆ. ಈ ಪ್ರಕರಣದಲ್ಲಿ ಮೇಲಿಂದ ಕೆಳಗಿನವರೆಗೂ ಭ್ರಷ್ಟಾಚಾರ ನಡೆದಿದೆ ಎಂದು ಕಿಡಿಕಾರಿದ್ದಾರೆ.

ಈ ಆಡಿಯೋ ಮೂಲಕ ತಿಳಿಯುವುದೆನೆಂದರೆ, ಈ 545ರ ಅಕ್ರಮ ಜೊತೆ, ಜೊತೆಗೆ ಮುಂದಿನ 402 ಪೋಸ್ಟ್ಗಳನ್ನು ಸಹ ಬುಕ್ ಮಾಡಲಾಗಿದೆ. ಈ ಸಂಬಂಧ 371 ಜೆ ಸರಿಯಾಗಿ ಜಾರಿ ಆಗಿಲ್ಲ ಅಕ್ರಮ ನಡೆದಿದೆ ಎಂದು ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳು ಕೋರ್ಟ್ಗೆ ಹೋಗಿದ್ದಾರೆ.

ಆದರೂ ಏನು ಆಗಲ್ಲ ಅಂತ ಆಯ್ಕೆಯಾದ ಪಿಎಸ್ಐ ಹೇಳುತ್ತಾನೆ. ಈ ಸರ್ಕಾರದಲ್ಲಿ ನಮ್ಮ ಭಾಗದವರ ಪರಿಸ್ಥಿತಿ ನೋಡಿ. ಈ ಪ್ರಕರಣದಲ್ಲಿ ಸರ್ಕಾರ, ಪರೀಕ್ಷಾ ಕೇಂದ್ರ, ಸಿಬ್ಬಂದಿ ಎಲ್ಲರೂ ಶಾಮಿಲಾಗಿದ್ದಾರೆ. ಅಭ್ಯರ್ಥಿಯ ಎಕ್ಸಾಂ ಸೆಂಟರ್ ಬುಕ್ ಮಾಡುವುದರಿಂದ ಹಿಡಿದು ಎಲ್ಲಾ ಕೂಡ ನೇಮಕಾತಿ ಪರೀಕ್ಷೆಯಲ್ಲಿ ಬುಕ್ ಆಗುತ್ತವೆ ಎಂದು ತಿಳಿಸಿದ್ದಾರೆ.

57 ಸಾವಿರ ಯುವಕರ ನೌಕರಿಯ ಭವಿಷ್ಯವಿದೆ. ತನಿಖಾಧಿಕಾರಿ ಚೇಂಜ್ ಮಾಡುವುದು ಸರಿಯಲ್ಲ. ಈ ಪರೀಕ್ಷೆಯಲ್ಲಿ ಸಾಕಷ್ಟು ಜನ ಅಕ್ರಮದಿಂದ ನೇಮಕವಾಗಿದ್ದಾರೆ. ಹೀಗಾಗಿ ಈ ಪರೀಕ್ಷೆ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು.

ಈ ಆಡಿಯೋದಲ್ಲಿರುವ ಓರ್ವ ವ್ಯಕ್ತಿ ಯಾರು ಅಂತ ನನಗೆ ಗೊತ್ತಿದೆ. ನನಗೆ ಸಿಕ್ಕ ಆಡಿಯೋ ಪೊಲೀಸರಿಗೆ ಸಿಗಲ್ವಾ ಎಂದು ಪ್ರಶ್ನಿಸಿದ್ದಾರೆ.

ಈ ಆಡಿಯೋದಲ್ಲಿ ಆಯ್ಕೆಯಾದವರು ನಾನು ಎಚ್.ಕೆ ಭಾಗದವರು ಸಿಂದಗಿಯಲ್ಲಿ ಇದ್ದಿನಿ ಅಂತ ಹೇಳಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಮಹಾಂತೇಷ್ ಪಾಟೀಲ್ 2019ರಲ್ಲಿ ರಾಜೀನಾಮೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆರೋಲ್ ನೀಡಿದ ಹೈಕೋರ್ಟ್!