Select Your Language

Notifications

webdunia
webdunia
webdunia
webdunia

ಜನರಿಗೆ ವಿದ್ಯುತ್ ಶಾಕ್ ಖಚಿತ !

ಜನರಿಗೆ ವಿದ್ಯುತ್ ಶಾಕ್ ಖಚಿತ !
ಬೆಂಗಳೂರು , ಬುಧವಾರ, 29 ಜೂನ್ 2022 (07:03 IST)
ಬೆಂಗಳೂರು : ಪೆಟ್ರೋಲ್, ಡೀಸೆಲ್, ಗ್ಯಾಸ್ ಆಯಿತು. ಇದೀಗ ವಿದ್ಯುತ್ ದರ ಏರಿಕೆ ಸರದಿ. ರಾಜ್ಯದಲ್ಲಿ ಜುಲೈ 1 ರಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದೆ.

ಹೌದು, ಬೆಲೆ ಏರಿಕೆ ಬಿಸಿ ನಡುವೆ ರಾಜ್ಯ ಸರ್ಕಾರ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಿದೆ. ಜುಲೈ 1 ರಿಂದ ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಹೆಚ್ಚಾಗಲಿದೆ.

ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು, ಇನ್ಮುಂದೆ ಹೆಚ್ಚುವರಿಯಾಗಿ 19 ರೂಪಾಯಿಂದ 31 ರೂಪಾಯಿ ಪಾವತಿಸಬೇಕು. 

ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ)ಕ್ಕೆ ಎಸ್ಕಾಂಗಳು (ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ, ಸೆಸ್ಕ್ ನಿಂದ ಪ್ರಸ್ತಾವ ಸಲ್ಲಿಸಲು ಅನುಮೋದಿಸಲಾಗಿತ್ತು. 

 
* ಪ್ರತಿ ಯೂನಿಟ್ಗೆ 38 ರಿಂದ 55 ರೂ. ವಸೂಲಿ ಮಾಡಲು ಎಸ್ಕಾಂಗಳು ಕೋರಿದ್ದವು
* ಬೆಸ್ಕಾಂ – 55.28
* ಮೆಸ್ಕಾಂ – 38.98
* ಸೆಸ್ಕ್ – 40.47
* ಹೆಸ್ಕಾಂ – 49.54

 


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ