Select Your Language

Notifications

webdunia
webdunia
webdunia
webdunia

ಹಳ್ಳಿಗೆ ಲಸಿಕೆಗಳನ್ನು ಸಾಗಿಸಿದ ಡ್ರೋನ್!

ಹಳ್ಳಿಗೆ ಲಸಿಕೆಗಳನ್ನು ಸಾಗಿಸಿದ ಡ್ರೋನ್!
ಮಹಾರಾಷ್ಟ್ರ , ಶನಿವಾರ, 18 ಡಿಸೆಂಬರ್ 2021 (14:14 IST)
ಮುಂಬೈ : ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆಯನ್ನು ದೂರದ ಹಳ್ಳಿಗಳಿಗೆ ಡ್ರೋನ್ ಮುಖಾಂತರ ತಲುಪಿಸುವ ವ್ಯವಸ್ಥೆ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ನ ಜಿಲ್ಲಾಡಳಿತವು ಈ ಪ್ರಯೋಗವನ್ನು ನಡೆಸಿದೆ. ಈ ಪ್ರಯೋಗದ ಭಾಗವಾಗಿ 300 ಲಸಿಕೆಗಳನ್ನು ಜವಾಹರ್ನಿಂದ ಝಾಫ್ ಗ್ರಾಮಕ್ಕೆ ಸಾಗಿಸಲಾಗಿದೆ.

ಗುರುವಾರ ಯಶಸ್ವಿಯಾಗಿ ನಡೆಸಿದ ಪ್ರಯೋಗ ಬಹುಶಃ ರಾಜ್ಯದಲ್ಲಿಯೇ ಮೊದಲನೆಯದು ಎಂದು ಜಿಲ್ಲಾಧಿಕಾರಿ ಡಾ. ಮಾಣಿಕ್ ಗುರ್ಸಾಲ್ ಹೇಳಿದರು.

ಲಸಿಕೆಗಳನ್ನು ವೇಗವಾಗಿ ಗ್ರಾಮಸ್ಥರ ಮನೆ ಬಾಗಿಲಿಗೆ ಡ್ರೋನ್ ಮೂಲಕ ತಲುಪಿಸಬಹುದು. ಲಸಿಕೆಗಳು ಸರಿಯಾದ ಸಂದರ್ಭಕ್ಕೆ ಸಿಗುವುದಿಲ್ಲ ಎಂಬ ಜನರ ತಪ್ಪು ಕಲ್ಪನೆಗಳನ್ನು ತೆಗದು ಹಾಕಲು ಈ ಪ್ರಯೋಗ ಸಹಾಯಕಾರಿಯಾಗುತ್ತದೆ ಎಂದು ಪಾಲ್ಘರ್ನ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ದಯಾನಂದ ಸೂರ್ಯವಂಶಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಾರಸುದಾರಿಗೆ ವಾಹನ ನಷ್ಟದ ಪರಿಹಾರ ಮೊತ್ತ