Select Your Language

Notifications

webdunia
webdunia
webdunia
webdunia

5 ಸ್ಟಾರ್ ಹೋಟೆಲ್ನಲ್ಲಿ ಕುಳಿತು ರೈತರನ್ನು ದೂಷಿಸಬೇಡಿ :ಸುಪ್ರೀಂ

5 ಸ್ಟಾರ್ ಹೋಟೆಲ್ನಲ್ಲಿ ಕುಳಿತು ರೈತರನ್ನು ದೂಷಿಸಬೇಡಿ :ಸುಪ್ರೀಂ
ನವದೆಹಲಿ , ಶನಿವಾರ, 20 ನವೆಂಬರ್ 2021 (07:27 IST)
ಹೊಸ ದಿಲ್ಲಿ : ದಿಲ್ಲಿಯ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಕುಳಿತ ಜನರು ದಿಲ್ಲಿಯಲ್ಲಿ ವಾಯು ಮಾಲಿನ್ಯಕ್ಕೆ ರೈತರು ಸುಡುವ ಕೃಷಿ ತ್ಯಾಜ್ಯವೇ ಕಾರಣ ಎಂದು ಆರೋಪಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗದುಕೊಂಡಿದೆ.
ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳದೆ ವಿನಾ ಕಾರಣ ರೈತರ ಮೇಲೆ ಆರೋಪಿಸುತ್ತಿದ್ದಾರೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ದಿಲ್ಲಿ ರಸ್ತೆಯಲ್ಲಿ ವಾಯು ಮಾಲಿನ್ಯ ಉಂಟು ಮಾಡುವ ಹೈ ಫೈ ಕಾರುಗಳನ್ನು ಚಲಾಯಿಸುವ ಜನರು ಸಾರಿಗೆಯ ಹೆಸರಿನಲ್ಲಿ ವಾಯು ಮಾಲಿನ್ಯಕ್ಕೆ ಕಾರಣರಾಗಿದ್ದಾರೆ ಎಂದೂ ಪೀಠ ಹೇಳಿದೆ. ರೈತರು ಕೃಷಿ ತ್ಯಾಜ್ಯ ಸುಡುವ ಬದಲು ಅದರ ನಿರ್ವಹಣೆಗೆ ಯಂತ್ರಗಳನ್ನು ಖರೀದಿಸುವಷ್ಟು ಶಕ್ತರೇ ಎಂಬ ವಿಚಾರದ ಬಗ್ಗೆ ಯಾರೊಬ್ಬರೂ ಯೋಚಿಸುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ರೈತರು ವೈಜ್ಞಾನಿಕ ಪದ್ದತಿ ಅನುಸರಿಸದೆ ಕೃಷಿ ತ್ಯಾಜ್ಯವನ್ನು ಸುಡುತ್ತಿರುವುದಕ್ಕೆ ಕಾರಣವೇನು ಎಂದು ಯಾರೂ ಯೋಚಿಸುತ್ತಿಲ್ಲ. ಸಾಂಪ್ರದಾಯಿಕ ಪದ್ದತಿಯನ್ನೇ ರೈತರು ಏಕೆ ಅನುಸರಿಸುತ್ತಿದ್ದಾರೆ ಎಂದು ವರದಿಯಲ್ಲಿ ನಮೂದಿಸಿಲ್ಲ ಎಂದು ಪೀಠ ಹೇಳಿದೆ.
ರೈತರು ಕೃಷಿ ತ್ಯಾಜ್ಯ ಸುಡುತ್ತಿರುವ ಬಗ್ಗೆ ದಿಲ್ಲಿಯ 5 ಸ್ಟಾರ್ ಹಾಗೂ 7 ಸ್ಟಾರ್ ಹೋಟೆಲ್ಗಳಲ್ಲಿ ಕುಳಿತು ವಾದ ಮಂಡಿಸುತ್ತಾರೆ. ವಾಯು ಮಾಲಿನ್ಯಕ್ಕೆ ರೈತರೇ ಕಾರಣ ಎನ್ನುತ್ತಾರೆ. ಆದ್ರೆ, ಅವರು ತಮ್ಮ ಬಳಿ ಇರುವ ತುಂಡು ಭೂಮಿಯಲ್ಲಿ ಎಷ್ಟು ದುಡಿಯಬಲ್ಲರು? ಎಷ್ಟು ಗಳಿಸಬಲ್ಲರು? ಇಂಥವರು ಅತ್ಯಾಧುನಿಕ ಯಂತ್ರಗಳನ್ನು ಖರೀದಿಸಿ ಕೃಷಿ ತ್ಯಾಜ್ಯದ ನಿರ್ವಹಣೆ ಮಾಡಬಲ್ಲರೇ? ಹೀಗಾಗಿ ವೈಜ್ಞಾನಿಕವಾದ ಯಾವುದೇ ಪರ್ಯಾಯ ಆಯ್ಕೆಗಳಿದ್ದರೆ ರೈತರ ಮುಂದಿಟ್ಟು ಅವರ ಮನವೊಲಿಸಿ ಎಂದು ನ್ಯಾ. ಡಿ. ವೈ. ಚಂದ್ರಚೂಡ್ ಹಾಗೂ ಸೂರ್ಯ ಕಾಂತ್ ಅವರಿದ್ದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಸಲಹೆ ನೀಡಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಗೆ ಜಲ ದಿಗ್ಭಂದನ