Daily Horoscope
✕

ಸ್ವದೇಶಿ ತರಬೇತಿ ವಿಮಾನ ‘ಹಂಸ’ ಯಶಸ್ವಿ ಹಾರಾಟ

Webdunia
ಭಾನುವಾರ, 6 ಮಾರ್ಚ್ 2022 (14:06 IST)
ಬೆಂಗಳೂರು :  ಭಾರತದ ಮೊದಲ ಸ್ವದೇಶಿ ತರಬೇತಿ ವಿಮಾನ ‘ಹಂಸ-ಎನ್ಜಿ’ಯ ಸಮುದ್ರದ ಮೇಲಿನ ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ.
ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ  ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಈ ವಿಮಾನ ವಿವಿಧ ಪರೀಕ್ಷೆಗಳಲ್ಲಿ ಉತ್ತಿರ್ಣವಾಗಿದ್ದು ವಾಣಿಜ್ಯ ಬಳಕೆಗೆ ಅವಕಾಶ ಪಡೆಯುವ ಅಂತಿಮ ಹಂತಕ್ಕೆ ಬಂದಿದೆ.

ಪುದುಚೇರಿಯ ಕಡಲ ಮೇಲೆ ಈ ಪ್ರಯೋಗಾರ್ಥ ಹಾರಾಟ ನಡೆದಿದ್ದು, 140 ನಾಟಿಕಲ್ ಮೈಲಿ (1 ನಾಟಿಕಲ್ ಮೈಲಿ-1.852 ಕಿ.ಮೀ.) ಅಂತರವನ್ನು ಒಂದೂವರೆ ಗಂಟೆಯಲ್ಲಿ ಕ್ರಮಿಸಿದೆ. ಈ ಹಾರಾಟದ ಸಂದರ್ಭದಲ್ಲಿ ವಿಮಾನ ಏರುವ, ಇಳಿಯುವ, ನೆಲ ಸ್ಪರ್ಶಿಸುವ, ವಿಮಾನದ ಸಂರಚನೆಯ ಪ್ರದರ್ಶನ ಮುಂತಾದ ಅಗತ್ಯ ಅಂಶಗಳನ್ನು ಪರಿಶೀಲಿಸಲಾಗಿದೆ ಎಂದು ಎನ್ಎಎಲ್ ಹೇಳಿದೆ.

18 ಗಂಟೆ ಸಮುದ್ರದ ಮೇಲಿನ ಹಾರಾಟ ನಡೆಸಲಾಗಿದೆ. ಸಮುದ್ರ ಪರೀಕ್ಷೆಯಲ್ಲಿ ಪರಿಗಣಿಸಬೇಕಾದ ಎಲ್ಲ ಉದ್ದೇಶಗಳೂ ಈಡೇರಿದ್ದು, ಈ ವಿಮಾನವನ್ನು ಮತ್ತೆ ಬೆಂಗಳೂರಿಗೆ ತರಲಾಗಿದೆ. ಇನ್ನೂ ಕೆಲ ಸುತ್ತಿನ ಹಾರಾಟದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಪ್ರಮಾಣೀಕರಣಕ್ಕೆ ಏಪ್ರಿಲ್ನಲ್ಲಿ ಅರ್ಜಿ ಸಲ್ಲಿಸಲಾಗುವುದು.

ಈ ವಿಮಾನಕ್ಕೆ ಮಾನ್ಯತೆ ಸಿಕ್ಕರೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಈ ವಿಮಾನದ ಉತ್ಪಾದನೆಯ ಪ್ರಯತ್ನಕ್ಕೆ ಕೈ ಹಾಕಲಾಗುವುದು ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ ಮಹಾನಿರ್ದೇಶಕ ಶೇಖರ್ ಸಿ. ಮಂಡೆ ಹೇಳಿದ್ದಾರೆ.

ಈ ವಿಮಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್ಎಎಲ್, ಎಎಸ್ಟಿಇ, ಡಿಜಿಸಿಎ ಮತ್ತು ಎಚ್ಎಎಲ್ ಸಂಸ್ಥೆಗಳನ್ನು ಅವರು ಅಭಿನಂದಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಟೋಪಿ ಧರಿಸಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ಬಂದ ಸಚಿವರ ಸಹಾಯಕ: ಹೊರನಡೆಯಿರಿ ಎಂದು ಭಕ್ತರ ಆಕ್ರೋಶ Video

ಮಸೀದಿ ಚರ್ಚ್ ನಲ್ಲಿ ಓಂ ಬಿಡಿಸಲು ಬಿಡ್ತೀರಾ: ಅರ್ಕೇಶ್ವರ ದೇವಸ್ಥಾನದ ಗೋಡೆ ಮೇಲೆ ಮಸೀದಿ, ಶಿಲುಬೆ ಚಿತ್ರಕ್ಕೆ ಆಕ್ರೋಶ Video

ಪಾಸ್ಪೋರ್ಟ್ ಕಳೆದುಹೋಗಿದೆಯೇ, ಆತಂಕ ಪಡಬೇಡಿ, ತಕ್ಷಣವೇ ಈ ಪ್ರಮುಖ ಹಂತಗಳನ್ನು ಅನುಸರಿಸಿ

ಸಿಜೆಪಿ, ಕಾಂಗ್ರೆಸ್ ಎಸ್ಐಆರ್ ಪ್ರತಿಭಟನೆ ನಡುವೆ ಹೈರಾಣಾಗಿದ್ದು ವ್ಯಾಪಾರಿಗಳು: ದೆಹಲಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವೇನು

ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ರ‍್ಯಾಲಿ: ಎಸ್‌ಐಆರ್ ವಿವಾದದ ಪ್ರತಿಭಟನೆಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments