Publish Date: Fri, 01 Jul 2022 (10:14 IST)
Updated Date: Fri, 01 Jul 2022 (09:14 IST)
ಇದೀಗ ಎಲ್ಲಲ್ಲೂ ರೀಲ್ಸ್ ಹವಾ. ಕೇವಲ ಪಡ್ಡೆಗಳ ಅಡ್ಡೆಯಾಗಿದ್ದ ರೀಲ್ಸ್ ಎಂಬ ಸಾಮಾಜಿಕ ಜಾಲತಾಣವನ್ನು ಸಾಮಾನ್ಯರು ಮಾತ್ರವಲ್ಲ, ಸಿಲಿಬ್ರಿಟಿಗಳು ಕೂಡ ಇದೀಗ ಅತೀ ಹೆಚ್ಚು ಬಳಸುತ್ತಿದ್ದಾರೆ.
ಮೊನ್ನೆಯಷ್ಟೇ ಕಿಚ್ಚ ಸುದೀಪ್ ಕೂಡ ತಮ್ಮ ಹಾಡಿಗೆ ರೀಲ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು. ರೀಲ್ಸ್ ಮಾಡಿಯೇ ಬದುಕು ನಡೆಸುತ್ತಿರುವವರೂ ನಮ್ಮ ಮಧ್ಯೆ ಇದ್ದಾರೆ. ಆದರೆ, ರೀಲ್ಸ್ ಮಾಡುವ ಮುನ್ನ ಈ ಬಗ್ಗೆ ಹುಷಾರಾಗಿರುವುದು ಒಳಿತು.
ಬೈಕ್ ಚಲಾಯಿಸುತ್ತಾ ರೀಲ್ಸ್ ಮಾಡುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಅಂತಹ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಬೈಕ್ ಓಡಿಸುತ್ತಾ ವ್ಹೀಲಿಂಗ್ ಮಾಡುವುದು, ಹೆಲ್ಮೆಟ್ ಹಾಕದೇ ಇರುವುದು, ಫೋನ್ ನಲ್ಲಿ ಮಾತನಾಡುತ್ತಿರುವುದು, ವೇಗವಾಗಿ ಗಾಡಿ ಓಡಿಸುವುದು ಹೀಗೆ ನಾನಾ ಅಪರಾಧಗಳಲ್ಲಿ ಅವರಿಗೆ ದಂಡ ವಿಧಿಸುತ್ತಿದ್ದಾರೆ.
.