ಡೆಲ್ಟಾಗಿಂತ ಭಿನ್ನ ವೈರಸ್ ಪತ್ತೆ !

Webdunia
ಸೋಮವಾರ, 29 ನವೆಂಬರ್ 2021 (17:14 IST)
ಬೆಂಗಳೂರು : ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿರುವ ಓರ್ವ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನ ಸ್ವರೂಪದ ವೈರಸ್ ಕಂಡು ಬಂದಿದೆ.
63 ವರ್ಷದ ವ್ಯಕ್ತಿಯಲ್ಲಿ ಭಿನ್ನ ವೈರಸ್ ಕಂಡುಬಂದಿರುವುದನ್ನು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡಾ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಬೆಂಗಳೂರಿನಲ್ಲಿ 63 ವರ್ಷದ ಒಬ್ಬ ವ್ಯಕ್ತಿಯಲ್ಲಿ ಇಂತಹ ವೈರಾಣು ಕಂಡುಬಂದಿದೆ. ಇದು ಡೆಲ್ಟಾ ವೈರಸ್ಗಿಂತ ಭಿನ್ನವಾಗಿದೆ. ಆದರೆ ಇದು ಯಾವ ಸ್ವರೂಪದ ವೈರಸ್ ಎಂಬುವುದು ಇನ್ನು ದೃಢಪಟ್ಟಿಲ್ಲ. ಸೋಮವಾರ ಸಂಜೆಯೊಳಗಡೆ ವರದಿ ಕೈಸೇರಲಿದೆ. ಇದಾದ ಬಳಿಕವೇ ಸ್ಪಷ್ಟಗೊಳ್ಳಲಿದೆ ಎಂದರು.
ಈ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ಕೇಂದ್ರದ ಆರೋಗ್ಯ ಸಂಸ್ಥೆ (ಐಸಿಎಂಆರ್) ಜೊತೆ ಸಂಪರ್ಕದಲ್ಲಿ ಇದ್ದೇನೆ. ಸಂಜೆ ವರದಿ ಬಂದ ಬಳಿಕ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾ ಸೇರಿದಂತೆ 12 ದೇಶಗಳಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಅಧಿಕೃತವಾಗಿ ಈ ಸೋಂಕು ಪತ್ತೆಯಾಗಿಲ್ಲ. ಆದರೆ ಇದೀಗ ದಕ್ಷಿಣ ಆಫ್ರಿಕಾದಿಂದ ಬಂದ ಓರ್ವ ವ್ಯಕ್ತಿಯಲ್ಲಿ ಭಿನ್ನ ಸ್ವರೂಪದ ವೈರಾಣು ಪತ್ತೆಯಾಗಿರುವು ಆತಂಕಕ್ಕೆ ಕಾರಣವಾಗಿದೆ.
ಓಮಿಕ್ರಾನ್ ಬಗ್ಗೆ ಡಿಸಂಬರ್ 1 ಕ್ಕೆ ನಿಖರ ವರದಿ ಬರುತ್ತದೆ. 12 ದೇಶಗಳಲ್ಲಿ ಕಾಣಿಸಿಕೊಂಡಿದೆ. ಅಂತರಾಷ್ಟ್ರೀಯ ವಿಮಾನಗಳಲ್ಲಿ ಬರುವ ಪ್ರಯಾಣಿಕರಿಗೆ ಎಚ್ಚರಿಕೆಯಿಂದ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಂಗಾ ನದಿಗೆ ಓರ್ವ ಹಾಲೆರೆಯುವಾಗ ಕಂಡುಬಂದ ದಯನೀಯ ದೃಶ್ಯವಿದು Video

ರಾಜ್ಯಪಾಲರ ವಿರುದ್ಧ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಗೋ ಬ್ಯಾಕ್ ಗವರ್ನರ್: ಕಾಂಗ್ರೆಸ್ ನಿಂದ ಅಭಿಯಾನ

Karnataka Weather: ಈ ಬಾರಿ ಬೇಸಿಗೆ ಹೇಗಿರಲಿದೆ, ಹವಾಮಾನ ತಜ್ಞರ ಎಚ್ಚರಿಕೆ ಗಮನಿಸಿ

ಮನ್ರೇಗಾ ಬಗ್ಗೆ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಲು ಕಾಂಗ್ರೆಸ್ ಸರ್ಕಾರ ಹೊರಟಿತ್ತು: ಶಿವರಾಜ್ ಸಿಂಗ್ ಚೌಹಾಣ್

ಮುಂದಿನ ಸುದ್ದಿ
Show comments