Select Your Language

Notifications

webdunia
webdunia
webdunia
webdunia

ರಿಂಗ್ ರೋಡ್ ಬೆಂಗಳೂರನಲ್ಲಿ ರಿಂಗ್ ರೋಡ್

ರಿಂಗ್ ರೋಡ್ ಬೆಂಗಳೂರನಲ್ಲಿ ರಿಂಗ್ ರೋಡ್
ಬೆಂಗಳೂರು , ಸೋಮವಾರ, 29 ನವೆಂಬರ್ 2021 (15:30 IST)
ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಫೆರಿಫೆರಲ್​ ರಿಂಗ್​ ರೋಡ್​ ರಚನೆ ಮಾಡಲು ಭೂಮಿ ಸ್ವಾಧೀನಪಡಿಸಿಕೊಳ್ಳಿ ಹಾಗೂ ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರ್ಕಾರ ಹಾಗೂ ಬಿಡಿಎಗೆ ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದೆ.‌
 
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.​ ಅಬ್ದುಲ್​ ನಜೀರ್​ ಹಾಗೂ ಸಂಜೀವ್​ ಖನ್ನಾ ನೇತೃತ್ವದ ಪೀಠ ಈ ನಿರ್ದೇಶನ ನೀಡಿದೆ.ಬೆಂಗಳೂರಿನ ಭೌಗೋಳಿಕ ವಿಸ್ತೀರ್ಣ 2196 ಚದರ ಕಿಲೋಮೀಟರ್​ ಆಗಿದೆ. 2019ರ ವೇಳೆಗೆ ವಾಹನಗಳ ಸಂಖ್ಯೆ 80 ಲಕ್ಷಕ್ಕಿಂತ ಹೆಚ್ಚಾಗಿದೆ. ಬೆಂಗಳೂರು ರಾಜ್ಯ ರಾಜಧಾನಿಯಾಗಿರೋದ್ರಿಂದ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಪ್ರತಿದಿನ ಸಾವಿರಾರು ವಾಹನಗಳು ಬರುತ್ತವೆ. ರಸ್ತೆಗಳಲ್ಲಿ ಅಗಾಧವಾದ ದಟ್ಟಣೆ ಇರುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅತಿಯಾದ ಒತ್ತಡದಲ್ಲಿದೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

15 ತಿಂಗಳಯಿಂದೆ ಮೃತಪಟ್ಟ ಕೋವಿಡ್ ರೋಗಿಗಳ ಶವ ಪತ್ತೆ