Select Your Language

Notifications

webdunia
webdunia
webdunia
webdunia

ಶಾಲೆಗಳನ್ನು ತೆರೆಯುತ್ತಿದ್ದಂತೆ ಕೆಲವು ರಾಜ್ಯಗಳ ಮಕ್ಕಳಲ್ಲಿ ಕೋವಿಡ್ ಪ್ರಕರಣ ಏರಿಕೆ

ಶಾಲೆಗಳನ್ನು ತೆರೆಯುತ್ತಿದ್ದಂತೆ ಕೆಲವು ರಾಜ್ಯಗಳ ಮಕ್ಕಳಲ್ಲಿ ಕೋವಿಡ್ ಪ್ರಕರಣ ಏರಿಕೆ
ನವದೆಹಲಿ , ಬುಧವಾರ, 1 ಸೆಪ್ಟಂಬರ್ 2021 (13:22 IST)
ನವದೆಹಲಿ (ಸೆ 01): ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಭೀತಿಯ ನಡುವೆಯೂ ಹಲವಾರು ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭ ಮಾಡಲಾಗಿದೆ. ಈಗಾಗಲೇ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ಮಕ್ಕಳ ಮೇಲೆ ಅಧಿಕ ಪ್ರಮಾಣ ಬೀರುತ್ತದೆ ಎಂದು ಈಗಾಗಲೇ ಹಲವಾರು ತಜ್ಞರು ಹೇಳಿದ್ದರು. ಈ ನಡುವೆಯೂ ಶಾಲೆಗಳನ್ನು ತೆರೆಯಲಾಗಿದೆ. ಶಾಲೆಗಳನ್ನು ತೆರಯುತ್ತಿದ್ದಂತೆ ಹಲವಾರು ರಾಜ್ಯಗಳಲ್ಲಿ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ ಎಂದು ವರದಿಯಾಗಿದೆ.

ಮುಖ್ಯವಾಗಿ ಗುಜರಾತ್, ಪಂಜಾಬ್, ಬಿಹಾರ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ಉತ್ತರಾಖಂಡದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ. ಆದರೆ ಜಾರ್ಖಂಡ್ ಹಾಗೂ ಛಂಡೀಗಢದಲ್ಲಿ ಪರಿಸ್ಥಿತಿಯು ವಿಭಿನ್ನವಾಗಿದೆ. ಪಂಜಾಬ್ನಲ್ಲಿ ಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿರುವ ಅಂಕಿ ಅಂಶಗಳು ಶೇಕಡ 9.6 ಕ್ಕೆ ಏರಿಕೆಯಾಗಿದೆ. ಆಗಸ್ಟ್ 2 ರಿಂದ ಪಂಜಾಬ್ ರಾಜ್ಯದಲ್ಲಿ ಶಾಲೆಗಳನ್ನು ಮತ್ತೆ ಆರಂಭವಾಗಿದೆ.
ಇನ್ನುಳಿದಂತೆ ಬಿಹಾರ, ಮಧ್ಯ ಪ್ರದೇಶ, ಗುಜರಾತ್, ಛತ್ತೀಸ್ಗಢ ಮಕ್ಕಳಲ್ಲಿ ಪಾಸಿಟಿವಿಟಿ ಪ್ರಮಾಣವು ಶೇಕಡ 2 ರಿಂದ 3 ರ ನಡುವೆ ಇದೆ. ಇನ್ನು ಗುಜರಾತ್ನಲ್ಲಿ ಜುಲೈ 26 ರಿಂದ ಶಾಲೆಗಳನ್ನು ತೆರಯಲಾಗಿದೆ. ಇನ್ನು ಛಂಡೀಗಢ ಹಾಗೂ ಮಧ್ಯಪ್ರದೇಶದಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಶಾಲೆಗಳನ್ನು ಪುನರ್ ಆರಂಭ ಮಾಡಲಾಗಿದೆ. ಇನ್ನು ಬಿಹಾರದಲ್ಲಿ ಆಗಸ್ಟ್ 16 ರಿಂದ ಶಾಲೆಗಳನ್ನು ತೆರೆಯಲಾಗಿದೆ. ಉತ್ತರಾಖಂಡದಲ್ಲಿ ಆಗಸ್ಟ್ 2 ರಂದು ಶಾಲೆಗಳನ್ನು ತೆರೆಯಲಾಗಿದೆ. ಉತ್ತರಾಖಂಡದಲ್ಲಿ ಮಕ್ಕಳಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವು ಶೇಕಡ 1.9 ರಷ್ಟು ಇದೆ. ಈ ಎಲ್ಲಾ ರಾಜ್ಯಗಳಲ್ಲೂ ಈಗ ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ.
ಇನ್ನು ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆದ ಬಳಿಕವೂ ಪಾಸಿಟಿವಿಟಿ ಪ್ರಮಾಣವು ಕಡಿಮೆಯಾಗಿದೆ. ಜಾರ್ಖಾಂಡ್ನಲ್ಲಿ ಆಗಸ್ಟ್ 9 ರಂದು ಶಾಲೆಗಳನ್ನು ತೆರೆಯಲಾಗಿದ್ದು ಆದರೆ ಇಲ್ಲಿನ ಪಾಸಿಟಿವಿಟಿ ಪ್ರಮಾಣವು 0.9 ರಷ್ಟು ಇದೆ. ಈ ನಡುವೆ ದೆಹಲಿ, ತೆಲಂಗಾಣ, ಕರ್ನಾಟಕ ರಾಜ್ಯ ಸರ್ಕಾರಗಳು ಶಾಲೆಗಳನ್ನು ಆರಂಭ ಮಾಡುವ ದಿನಾಂಕವನ್ನು ಪ್ರಕಟ ಮಾಡಿದೆ. ತೆಲಂಗಾಣ, ಲಡಾಖ್ ಕೆಲವು ರಾಜ್ಯಗಳಲ್ಲಿ ಇಂದು ಶಾಲೆಗಳನ್ನು ಆರಂಭ ಮಾಡಲಿದೆ. ತೆಲಂಗಾಣದಲ್ಲಿ ಅಂಗನವಾಡಿ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಇಂದಿನಿಂದ ಶಾಲೆಗಳು ಆರಂಭವಾಗಲಿದೆ. ಆದರೆ ದೆಹಲಿ ಸರ್ಕಾರವು ಕೋವಿಡ್ ಕಾರಣದಿಂದಾಗಿ ಹಂತ ಹಂತವಾಗಿ ಶಾಲೆಗಳನ್ನು ಆರಂಭ ಮಾಡಲು ನಿರ್ಧರಿಸಿದೆ.
ದೆಹಲಿಯಲ್ಲಿ ಸೆಪ್ಟೆಂಬರ್ 1 ರಿಂದ 9-12 ನೇ ತರಗತಿಗಳು ಆರಂಭವಾಗಲಿದೆ. ಈ ದಿನದಿಂದಲ್ಲೇ ಕೋಚಿಂಗ್ ಸೆಂಟರ್ಗಳು, ಕಾಲೇಜುಗಳು ಹಾಗೂ ವಿಶ್ವ ವಿದ್ಯಾನಿಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಸೆಪ್ಟೆಂಬರ್ 8 ರಿಂದ ಎರಡನೇ ಹಂತದಲ್ಲಿ 6-8 ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭ ಮಾಡಲಾಗುತ್ತದೆ.
ಇನ್ನು ಅಕ್ಟೋಬರ್ನಲ್ಲಿ ಮಕ್ಕಳಿಗೆ ಕೊರೊನಾ ವೈರಸ್ ಸೋಂಕಿನ ವಿರುದ್ದ ಲಸಿಕೆಯನ್ನು ನೀಡಲು ಆರಂಭ ಮಾಡುವ ಸಾಧ್ಯತೆಯಿದೆ. ಈ ನಡುವೆ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ಅಪ್ಪಳಿಸುವ ಭೀತಿಯೂ ಇದೆ. ಈ ಅಲೆಯು ಮಕ್ಕಳನ್ನು ಗುರಿಯಾಗಿಸಲಿದೆ ಎಂಬುವುದು ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಪ್ರಯೋಗದ ವೇಗವನ್ನು ಹೆಚ್ಚಿಸಿದೆ. ಈ ಸಂದರ್ಭದಲ್ಲೇ ಹಲವಾರು ತಜ್ಞರು ಕೊರೊನಾ ವೈರಸ್ ಸೋಂಕು ಮಕ್ಕಳಲ್ಲಿ ಕಾಣಿಸಿಕೊಂಡರೂ ಮಕ್ಕಳಲ್ಲಿ ರೋಗ್ಯ ನಿರೋಧಕ ಶಕ್ತಿ ಅಧಿಕವಾಗಿ ಇರುವ ಕಾರಣ ಅವರನ್ನು ವೈರಸ್ನಿಂದ ರಕ್ಷಿಸಬಹುದು ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕಳೆದ ವರ್ಷ ಕಾಣಿಸಿಕೊಂಡ ಬಳಿಕ ದೇಶದಲ್ಲಿ ಎಲ್ಲಾ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಹಲವಾರು ಬಾರಿ ಶಾಲೆಗಳನ್ನು ತೆರೆಯುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆಯಾದರೂ ಕೊರೊನಾ ವೈರಸ್ ಸೋಂಕು ಹಿನ್ನೆಲೆ ಮುಂದೂಡಿಕೆ ಮಾಡಲಾಗಿದೆ. ಹಾಗೆಯೇ ಆನ್ಲೈನ್ ಶಿಕ್ಷಣವನ್ನು ನಡೆಸಲಾಗುತ್ತಿದೆ. ಆದರೆ ಆನ್ಲೈನ್ ಶಿಕ್ಷಣ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರದ ಕಾರಣ ಆಫ್ಲೈನ್ ಶಿಕ್ಷಣದ ಬೇಡಿಕೆ ಅಧಿಕವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು: ಹಲವೆಡೆ ಸೆ.1, 2ಕ್ಕೆ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ?