Publish Date: Mon, 10 Jan 2022 (17:18 IST)
Updated Date: Mon, 10 Jan 2022 (21:20 IST)
ನವದೆಹಲಿ : ಕೋವಿಡ್-19 ಸೋಂಕಿತರ ಸಂಖ್ಯೆ ಭಾರತದಲ್ಲಿ ಏರುತ್ತಿದ್ದು, ಈಗ 1000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿದೆ.
ಹೆಚ್ಚುವರಿ ಪೊಲೀಸ್ ಕಮಿಷನರ್(ಕ್ರೈಂ ಬ್ರಾಂಚ್) ಸೇರಿದಂತೆ ದೆಹಲಿಯ ಸುಮಾರು 1,000 ಪೊಲೀಸ್ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಈ ಕುರಿತು ಕುದ್ದು ಅಧಿಕಾರಿಗಳೇ ಇಂದು ತಿಳಿಸಿದ್ದಾರೆ. ಅದರಲ್ಲಿಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಿದೆ.
ಇತ್ತೀಚೆಗೆ ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಅವರು ಪೊಲೀಸ್ ಸಿಬ್ಬಂದಿಗೆ ವೈರಸ್ ಹರಡುವುದನ್ನು ತಡೆಗಟ್ಟಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್ಒಪಿ) ಅನ್ನು ಹೊರಡಿಸಿದ್ದರು. ಪೊಲೀಸರು ಸಾರ್ವಜನಿಕರ ಮಧ್ಯೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ.
ಪರಿಣಾಮ ಅವರಿಗೆ ಕೊರೊನಾ ಬೇಗ ಹರಡುತ್ತೆ. ಅದಕ್ಕೆ ಅವರು ಕೋವಿಡ್ ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಈ ಮೂಲಕ ತಿಳಿಸಿದರು.