Select Your Language

Notifications

webdunia
webdunia
webdunia
webdunia

ಗ್ರಾಹಕರ ಕೈಗೆಟಕದ ತರಕಾರಿ ಬೆಳೆ! ಬೆಲೆ ಎಷ್ಟಿದೆ ಗೊತ್ತ?

ಗ್ರಾಹಕರ ಕೈಗೆಟಕದ ತರಕಾರಿ ಬೆಳೆ! ಬೆಲೆ ಎಷ್ಟಿದೆ ಗೊತ್ತ?
ಬೆಂಗಳೂರು , ಶನಿವಾರ, 20 ನವೆಂಬರ್ 2021 (08:06 IST)
ಬೆಂಗಳೂರು : ಇದುವರೆಗೆ ಟೊಮೇಟೊ, ಈರುಳ್ಳಿ, ಬೀನ್ಸ್ ದರ ಮಾತ್ರ ನೂರರ ಗಡಿ ದಾಟುತ್ತಿದ್ದವು.
ಇದೇ ಮೊದಲ ಬಾರಿಗೆ ಬೆಂಡೆಕಾಯಿ, ಹೀರೇಕಾಯಿ, ಬದನೆಕಾಯಿ, ತೊಗರಿಕಾಯಿಯಂತಹ ಹಲವು ತರಕಾರಿಗಳು ಸೆಂಚುರಿ ಬಾರಿಸಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ದೊಡ್ಡ ಪ್ರಮಾಣದಲ್ಲಿ ತಟ್ಟಿದೆ. ಕ್ಯಾಪ್ಸಿಕಂ, ನುಗ್ಗೆಕಾಯಿ ಮತ್ತಿತರ ಕೆಲವು ತರಕಾರಿಗಳು ಗ್ರಾಹಕರ ಕೈಗೆಟುಕದಷ್ಟು ದುಬಾರಿಯಾಗಿವೆ.
ಇದುವರೆಗೆ ಈರುಳ್ಳಿ ಬೆಲೆ ಏರಿಕೆಯಿಂದ ಮಾತ್ರ ಫಜೀತಿಗೀಡಾಗುತ್ತಿದ್ದ ಗ್ರಾಹಕರು, ಈಗ ಎಲ್ಲಾ ರೀತಿಯ ತರಕಾರಿ, ಸೊಪ್ಪುಗಳ ದರ ಏರಿಕೆಯ ಬಿಸಿ ಅನುಭವಿಸುವಂತಾಗಿದೆ. ಇನ್ನೂ ಒಂದು ತಿಂಗಳು ಇದೇ ರೀತಿ ಬೆಲೆ ಏರಿಕೆ ಮುಂದುವರಿಯುವ ಮುನ್ಸೂಚನೆಯೂ ವ್ಯಕ್ತವಾಗಿದೆ.
ಮುಂಗಾರಿನಿಂದಲೂ ರಾಜ್ಯದಲ್ಲಿ ಭರ್ಜರಿ ಮಳೆ ಸುರಿದಿದೆ. ಹಾಗೆಯೇ, ಹಿಂಗಾರು ಆರಂಭಗೊಂಡ ಬಳಿಕ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ನಿರಂತರ ಮಳೆ ಸುರಿಯುತ್ತಿದೆ. ಹೊಲ, ತೋಟಗಳಲ್ಲಿ ನೀರು ತುಂಬಿಕೊಂಡು ಬೆಳೆ ನಾಶವಾಗಿದೆ. ಕಟಾವಿಗೆ ಬಂದಿರುವ ಫಸಲು ರೈತರ ಕೈಸೇರದಂತಾಗಿದೆ.
ಈಗಿನ ದರ -ಕಳೆದ ತಿಂಗಳ ದರ
•ಬಿಳಿ ಬದನೆಕಾಯಿ- 92 ರೂ. -51 ರೂ.
•ಟೊಮೇಟೊ 93 ರೂ.-38-40 ರೂ.
•ನುಗ್ಗೆಕಾಯಿ ದರ 234 ರೂ.- 140 ರೂ.
•ದಪ್ಪ ಮೆಣಸಿನಕಾಯಿ 130 ರೂ.-60 ರೂ.
•ಊಟಿ ಕ್ಯಾರಟ್ 104 ರೂ. -80 ರೂ.
•ನಾಟಿ ಕ್ಯಾರಟ್ 100 ರೂ. -80 ರೂ.
•ಹೂಕೋಸು ಒಂದಕ್ಕೆ 54 ರೂ. -45 ರೂ.
•ಬೆಂಡೆಕಾಯಿ 76 ರೂ. -52 ರೂ.
•ಮೂಲಂಗಿ 62 ರೂ.- 53 ರೂ.
•ಹೀರೇಕಾಯಿ 90 ರೂ.- 56 ರೂ.
•ಮೆಂತ್ಯ ಸೊಪ್ಪು 135 ರೂ. -80 ರೂ.
•ಪಾಲಾಕ್ ಸೊಪ್ಪು 100 ರೂ.-45-50 ರೂ.
•ದಂಟಿನ ಸೊಪ್ಪು 72 ರೂ. -38 ರೂ.
•ಸಬ್ಬಕ್ಕಿ 80 ರೂ. -53 ರೂ.
•ಹರಿವೆ ಸೊಪ್ಪು 72 ರೂ.-42 ರೂ.
•ಕೊತ್ತಂಬರಿ ನಾಟಿ 88 ರೂ.

 

Share this Story:

Follow Webdunia kannada

ಮುಂದಿನ ಸುದ್ದಿ

ಟೊಮೆಟೋಗೆ ಬಂಪರ್ ಬೆಲೆ!